ಕಾವ್ಯ ಸಂಗಾತಿ
ವಿನೋದ್ ಕುಮಾರ್ ಆರ್ ವಿ
ʼಪ್ರೀತಿಯಹಾದಿʼ

ಮೊದಲ ನೋಟದಲ್ಲಿ ಪ್ರೀತಿ ಹುಟ್ಟಲು
ಕಾರಣ ನೀನು
ಪ್ರೀತಿಯ ಪಾಠವ ಹೇಳಿಕೊಟ್ಟ
ಗುರುವು ನೀನು
ಮೌನದ ಕಡಲಲ್ಲಿ ಒಂಟಿಯಾಗಿ
ಬಾಳಯನ ಸಾಗುತ್ತಿತ್ತು
ಶಾಂತವಾಗಿದ್ದ ನನ್ನೆದೆಯಲ್ಲಿ
ಒಲವಿನಲೆಗಳನ್ನೆಬ್ಬಿಸಿದೆ ನೀನು
ಯಾವ ಮೋಹದ ಮಾಯೆಗೂ
ಸಿಗದ ಹೃದಯವಿದು
ಮುಗುಳುನಗೆಯ ಕೊನೆಯಲ್ಲಿ ಹರಿಸಿ
ಬಂಧಿಸಿದೆ ನೀನು
ಬೇರೆಡೆಗೆ ಹೋಗದ ಯೋಚನೆಗಳು
ಚೌಕಟ್ಟಿನಲ್ಲಿ ಬಂಧಿಯಾಗಿತ್ತು
ನೆನಪುಗಳ ಹೊಳೆಯನ್ನೇ
ಹರಿಸಿದೆ ನೀನು
ಪ್ರೇಮದ ನೆಲೆಯನ್ನು ಹುಡುಕದ ಮನಸ್ಸು
ಹತೋಟಿಯಲ್ಲಿತ್ತು
ಹಿಡಿತದಲ್ಲಿದ್ದ ಹೃದಯದ ಹಾದಿಯನ್ನು
ತಪ್ಪಿಸಿದೆ ನೀನು
———————————————————————–

ವಿನೋದ್ ಕುಮಾರ್ ಅರ್ ವಿ



