ಕಾವ್ಯ ಸಂಗಾತಿ
ಪಿ.ವೆಂಕಟಾಚಲಯ್ಯ
ಬದ್ಧತೆ.

ಆ ಜಾತಿ ಈ ಜಾತಿ, ಮತ್ಯಾವುದೊ ರೀತಿ,
ಅರಸುತಲೀ ನನ್ನಾಣೆ, ನಾನು ಹು ಟ್ಟಲಿಲ್ಲ.
ಅನಕ್ಷರಿಗಳು ಮುಗ್ಧರೆಂಬೆ, ನನ್ ಹೆತ್ತವರು,
ಬಗೆದ ದ್ರೋಹವನಿನಿತು , ನಿರೀಕ್ಷಿಸಿ ರಲಿಲ್ಲ.
ಸತಿಯ ಜನ್ಮದಾತರು ನರರೆ, ನಯ ವಂಚಕರು,
ಶುದ್ಧಾತ್ಮರವರಲ್ಲವೆಂಬುದನರಿತಿರಲಿಲ್ಲ.
ಅರಿತೊಡನೆಲ್ಲವ ತೊರೆಯಲ್, ನಾ ಬುದ್ಧನಲ್ಲ.
ಬದ್ಧತೆಯ ಕುಣಿಕೆಯ ಬಿಗಿತ, ತೊರೆಯ ಗೊಡಲಿಲ್ಲ.
ಅಸೂಯೆ,ಅನಾದರ,ನಿರ್ಲಕ್ಷ್ಯದಲ್ಲಿ ಬದುಕಿ,
ಸ್ವಹಿತಾಸಕ್ತಿಯ ಜನರ ನಡುವೆ, ಸಿ ಲುಕಿ ನಲುಗಿ,
ಎಂತಾದರೇಂ, ಹೇಗಿದ್ದರೇಂ, ಬದು ಕಿನಲಿ,
ಒಮ್ಮನ ದೃಡತೆ ಯಲಿ, ನಿಂದೆನು ಸ ಮಚಿತ ವಿವೇಕದಲಿ,
ಅಂದು, ಇಂದು, ಎಂದೆಂದಿಗೂ,ತೊ ಳಲಾಟವಿದು,
ವಿಧಿ ಬಿಗಿತ, , ಸಾಕೆನುತ ಬಿಟ್ಟನೆಂದ ರು ಬಿಡದು.
ಪಿ.ವೆಂಕಟಾಚಲಯ್ಯ
