ಕಾವ್ಯ ಸಂಗಾತಿ
ಪ್ರಭಾವತಿ ಹಿರೇಮಠ ಹುಬ್ಬಳ್ಳಿ
ʼಕನಸುಗಳುʼ

ಕನಸುಗಳು ಕಾಡುತ್ತವೆ
ನಿತ್ಯ ನಿರಂತರ
ಹಗಲು ಇರುಳು
ಆಗಸದಲ್ಲಿ ಬಿತ್ತಿದ ಬೀಜ
ಮಳೆಯ ಹನಿಯೊಂದಿಗೆ
ನೆಲಕೆ ಹಸಿರು ಚೆಲ್ಲಿದೆ
ನಿನ್ನ ಒಲವು
ಸೂರ್ಯ ಚಂದ್ರರ ಹರಕೆ
ಚುಕ್ಕಿಗಳ ಚೆಲ್ಲಾಟ
ಏನೋ ಸಾಧಿಸುವ
ನನ್ನ ಮನಸ್ಸು
ಎಲ್ಲಾ ಬೇಧವ ತೊರೆದು
ಸರಳ ಸತ್ಯ ಸಮತೆಯ
ದಾರಿಯಲ್ಲಿ ಸಾಧಿಸುವ
ಹಟವಿತ್ತು ನನ್ನ ಮನದಲ್ಲಿ
ಮುಟ್ಟುವೇನು ದಿಟ್ಟ ಗುರಿ
ಸಾಧಿಸುವೆ ಯಶವನ್ನು
ನನ್ನವರು ಹರಕೆಯಲಿ
ದಿವ್ಯ ಗೆಲುವು
ಹಲವು ಸಲ ಸೋತಿರುವೆ
ಗೆಲ್ಲುವುದು ನಿಶ್ಚಿತ
ಚಂದ್ರ ಪ್ರಭೆಯ ಜೊತೆ
ಎನ್ನ ಸೊಬಗು
ಕನಸುಗಳು ಕಾಡಲಿ
ಬಯಕೆಗಳು ಬೇಡಲಿ
ಮಲಗಿರುವ ನಾನು
ನಿತ್ಯ ದುಡಿವೆ
ಕನಸುಗಳ ಕೈ ಕುಲುಕಿ
ಬದುಕಿ ಬಿಡುವೆ
ನನ್ನ ಕನಸುಗಳ ಜೊತೆಗೆ
————
ಪ್ರಭಾವತಿ ಹಿರೇಮಠ ಹುಬ್ಬಳ್ಳಿ

Excellent poem
ಎಷ್ಟು ಸುಂದರ ಕವನ
Good exlent line