ನಮ್ಮೆಲ್ಲರ ಆಶೋತ್ತರಗಳು ಭಿನ್ನ,ನೋಡುವ ದೃಷ್ಟಿಕೋನವು ಕೂಡ ವಿಭಿನ್ನ.ಹೀಗಾಗಿ ‌ಕೈ ಬೆರಳುಗಳಿಗಿಂತ ಉತ್ತಮ ಉದಾಹರಣೆ ಮತ್ತೊಂದಿಲ್ಲ.ಯಾವ ಯಾವ ಮನಸ್ಥಿತಿಯಿಂದ ನಾವೀಗ ಬಳಲುತ್ತಿದ್ದಿವೆ ಎಂದರೆ,ಅದನ್ನು ಉಹಿಸಲು‌ ಸಾಧ್ಯವಿಲ್ಲ.ಮನುಷ್ಯನ ವ್ಯಕ್ತಿತ್ವದ ಚಹರೆಗಳು ಸಮಯ ಸಂದರ್ಭದಲ್ಲಿ ಅನಾವರಣಗೊಂಡಾಗ ಆಗುವ ಸಂಕಟ,ನೋವು,ನಲಿವು ಎಲ್ಲವೂ ನಮಗದುವೆ ಪಾಠ!… ಕಲಿಯಬೇಕಾದವರು ನಾವುಗಳು ಎಂಬುದನ್ನು ಮರೆತುಬಿಡುತ್ತಿವಿ.ಒಬ್ಬ ತಂದೆ ತನ್ನ ಜೀವಮಾನವಿಡೀ ತನ್ನ ಕುಟುಂಬದ ಏಳಿಗೆಗಾಗಿ ಶ್ರಮಿಸುತ್ತ ಎಲೆಮರೆಯಕಾಯಿಯಾಗಿ ಉಳಿದುಬಿಡುತ್ತಾನೆ.ಅವನು ಮಕ್ಕಳ ಪ್ರಪಂಚದಲ್ಲಿ” ಹೀರೋ”. ಈ ಹೀರೋ ಅವನ ರೆಟ್ಟೆಯ ಶಕ್ತಿ ಕುಂದುವವರೆಗೆ ದುಡಿಯುತ್ತಿದ್ದವ.ಅವ್ವನಂತೂ ಜಗತ್ತಿನ ಅಸ್ತಿತ್ವಕ್ಕೆ ಕಾರಣಿಭೂತಳು..”ಕ್ಷಮಯಾಧರಿತ್ರಿ”.ಇವರಿಬ್ಬರು ಮನುಷತ್ವದ ಜೀವ ಮಿಡಿತವೆಂದರೆ ತಪ್ಪಾಗದು.ಆದರೆ,ಅವರ ಪರಿಶ್ರಮಕ್ಕೆ ಬೆಲೆ ಕಟ್ಟುವ ತಾಕತ್ತಿಲ್ಲ. ಅದಕ್ಕೆ ತಾನೆ…” ಮಾತಾ,ಪಿತೃ ದೇವೋಭವ” ಅನ್ನುವುದು.

ಸಮಯ ಯಾರಿಗಾಗಿ ನಿಂತಿದೆ.ರೆಕ್ಕೆ ಬಲಿತ ಹಕ್ಕಿ ಗೂಡು ಬಿಟ್ಟು ಸ್ವತಂತ್ರ ವಾಗಿ ಬದುಕುವುದು ಸಹಜ ನಿಯಮ…ಆದರೆ ವಯಸ್ಸಾದ ಪಕ್ಷಿಗಳಿಗೆ  ಯುವ ಹಕ್ಕಿಗಳಿಗೆ ಆಹಾರದ ಗುಟುಕು ನೀಡುವುದನ್ನು ಕಂಡಿದ್ದೆನೆ.. ಅದು ಕಾಕತಾಳೀಯ ಘಟನೆಗಳನ್ನು ಮೆಲುಕು ಹಾಕಿದಂತೆಲ್ಲ, ಮನುಷ್ಯನ ನಡುವಳಿಕೆಗಳು ಪ್ರಾಣಿ ಪಕ್ಷಿಗಳಿಗಿಂತ ಕೀಳಾಗುತ್ತಿರುವುದು ಮೌಲ್ಯದ ತೂಕ ದಿನದಿಂದ ದಿನಕ್ಕೆ ಮಂಜಿನಂತೆ ಕರಗುತ್ತಿದೆ.ಹೆತ್ತವರಿಗೆ ಅರಿವಿಲ್ಲದೆಯೇ ಅವರನ್ನು ದೂರ ತಳ್ಳುತ್ತಿರುವುದು ಈಗಿನ ಫ್ಯಾಶನ್ ಆಗಿದೆ.ವಯೋವೃದ್ದರ ಅನಾರೋಗ್ಯ ಸಮಸ್ಯೆಗಳನ್ಹೊರಲು ತಯಾರಿಲ್ಲದ ಪರಿಸ್ಥಿತಿಗೆ ಬಂದು ನಿಂತಿದ್ದಾರೆ.ಇಂತಹುದರ ನಡುವೆ ನಾವುಗಳು ಹವ್ಯಾಸಿ ಓದುಗರು,ಬರಹಗಾರರು,ಆಸಕ್ತರು ಎಂದರೆ ಕೆಲವರಿಗಂತೂ ಇವರಿಗೆ ಬೇರೆ ಕೆಲಸಿಲ್ಲವೆಂದು ಆಡಿಕೊಂಡು ನಕ್ಕಿದ್ದನ್ನು ಕಂಡಾಗ,ಮೌನವೊಂದೆ ಉತ್ತರ.”ಕಾಯಕವೇ ಕೈಲಾಸ”ವೆಂದು  ಬಸವಣ್ಣನವರು ಹೇಳಿದ್ದು ಅಜರಾಮರ ಧ್ಯೇಯ ವಾಕ್ಯ ಅದನ್ನು ಪಾಲಿಸುವ ಗಳಿಗೆ ಎಲ್ಲರಿಗೂ ಸಿಗಬೇಕು.

ನಾವೆಲ್ಲ ಅಭಿಮಾನ ತೋರುವುದು ಸಾಧನೆಯ ಮೌಲ್ಯ ಅರಿತವರ ಬಗ್ಗೆ. ಹಾಗಾದರೆ ನಾವು ಅವನುಸರಿಸಬೇಕಾದ ಮಾನದಂಡಗಳು ಯಾವವು? ಪ್ರಶ್ನೆ ಮತ್ತು ಉತ್ತರವನ್ನು ಸ್ವತಃ ನಾವೆ ಕಂಡುಕೊಳ್ಳಬೇಕಾದ ಅನಿವಾರ್ಯತೆ ಇಂದು ಪ್ರಸ್ತುತ. ಹಾಗಿದ್ದ ಮೇಲೆ
ಅಭಿಮಾನಿಗಳು ಎಂದರೆ ಯಾರು? ಎಂಬ ಸರಳ ಪ್ರಶ್ನೆಯನ್ನು ಈಗ ತುಂಬಾ ಚರ್ಚಿಸುವ ವಿಷಯವಾಗಿದೆ.ಅತಿರೇಕದ ಅಭಿಮಾನ ಮನೆಗೆ ಆಪತ್ತು ತರದೆ ಬಿಡದು.ಯಾವುದು ಅತೀ ಅನ್ನುವ ಅಹಂ ಹುಚ್ಚೆದ್ದು ಕುಣಿಯತ್ತದೆಯೋ ಅಂತಹ ದುರಾಭಿಮಾನದ ಮತ್ತು ನೆತ್ತಿಗೇರಿದಷ್ಟು ಅಪಾಯ ತಪ್ಪದ್ದಲ್ಲ.ಇದು ಒಂದುತರ ನಶೆಯ ರೂಪ ತಾಳಿದ್ದು, ಅನುಕೂಲತೆಗಿಂತ ಅನಾನುಕೂಲವೇ ಜಾಸ್ತಿ.ಮೊನ್ನೆ ಮೊನ್ನೆಯಷ್ಟೇ ನಡೆದ ಅಭಿಮಾನದ ಸಾಗರದಲ್ಲಿ ಕೊಚ್ಚಿಹೋದ ಬೆರಳೆಣಿಕೆಯಷ್ಟು ಜೀವಗಳ ಬಲಿ ಪಡೆದದ್ದು ಯಾರು?.. ನಮ್ಮೊಳಗಿನ ಪ್ರಶ್ನೆ?.ಒಬ್ಬ ಅಭಿಮಾನಿ ಇನ್ನೊಬ್ಬ ಅಭಿಮಾನಿಯ ನಿರ್ಲಕ್ಷಿಸಿ ಸಾವಿನ ಮನೆಗೆ ತಳ್ಳುವ ಅಧಿಕಾರ ನೀಡಿದ್ದು ಯಾರು?..ದೊಡ್ಡ ದೊಡ್ಡ ಪರೆದೆಯ ಟಿ.ವಿಗಳು ಮನೆಯಲ್ಲಿ,ಅತಿರೇಕದ ಹುಚ್ಚಾಟಕೆ ಕುಟುಂಬಗಳು ನರಳವಂತಾಗಿದ್ದು ಅಮಾನುಷ ಕೃತ್ಯ. ಸಾಂತ್ವನ ನೀಡುವು ಕಾಯಕ ಯಾರದ್ದು?… ದೇವಸ್ಥಾನದ ಸರತಿ ಸಾಲಿನಲ್ಲೂ ನೂಕುನುಗ್ಗುಲು,ಆಟದ  ವೀಕ್ಷಣೆಯಲ್ಲೂ ಹೀಗೆ ಮೈ ಕೈಮೇಲೆ ಟ್ಯಾಟೋಗಳ ದಂಡು…ಮನೆ ಮನದಲ್ಲಿ ಇದೇ ಗುಂಗು ನಾವೆಲ್ಲ ಗೌರವಿಸುವ ಕೆಲಸ ಮಾಡಬೇಕೆ ವಿನಃ  ಯುದ್ದವಲ್ಲ.ಹೋದ ಜೀವಗಳು ಮರಳಿ ಬರಲಾರವು‌.
ಅಭಿಮಾನ ಶಾಂತಿದೂತನ ತರ ಇರಬೇಕು.ಹಿಂಸೆಗೆ ಪ್ರಚೋದಿಸುವಂತಿರಬಾರದು.ಪ್ರತಿಯೊಬ್ಬರ ಜೀವ ಅಮೂಲ್ಯ!.

ಗುಜರಾತಿನ ಅಹಮದಾಬಾದ್ ನ‌‌ಲ್ಲಿ ಆದ ಭೀಕರ ವಿಮಾನ ಪತನದ ಅಪಘಾತ ಎಂತವರನ್ನೂ ಬೆಚ್ಚಿಬೀಳಿಸುತ್ತದೆ.ನನಗೆ ವಿಮಾನದಲ್ಲಿ ಸಂಚರಿಸಬೇಕೆಂಬ ಆಸೆಗೆ ಮುಕ್ತಾಯ‌ ಹಾಡಲಾಯಿತು.ಸಾವು  ಎಲ್ಲಿ,ಹೇಗೆ ಕೈ ಬೀಸಿ ಕರೆಯುತ್ತದೆಯೋ ಅದನ್ನು ಉಹಿಸಲು ಸಾಧ್ಯವಿಲ್ಲ.ನಿರಪರಾಧಿಗಳು‌ ಜೀವ ಕಳೆದುಕೊಂಡ ಘಟನೆ,ರೈಲಿನ ಅಪಘಾತ,ಹೆಲಿಕಾಪ್ಟರ್ ಪತನ,ಬಸ್ ದುರಂತ ಹೀಗೆ….ಸಾವಿನ ಪಟ್ಟಿ ಬೆಳೆಯತ್ತಲೆ ಇರುತ್ತದೆ. ಕೈಮೀರಿ ಹೋಗುವ ಸಮಯವನ್ನು ಹಿಡಿದಿಡುವ ಧೈರ್ಯ ಯಾರಿಗಿದೆ? ನಾವೆಲ್ಲ ಪಾತ್ರಧಾರಿಗಳು ಮಾತ್ರ,ಸೂತ್ರಧಾರ ಪರದೆಯ ಹಿಂದಿರುವಾಗ;ನಮ್ಮ ಪಾತ್ರಕೆ ಬೆಲೆ ನಾವು ಇರುವಷ್ಟು ಸಮಯ ಮಾತ್ರ. ಕಾಲಚಕ್ರ ತನ್ನ ಕಾಯಕವನ್ನು ನಿಷ್ಠೆಯಿಂದ ನಿರ್ವಹಣೆ ಮಾಡುತ್ತಿದೆ.ಇಂದು‌ ನಾವು ನಾಳೆ ಇನ್ಯಾರೋ..

ಒಟ್ಟಾರೆಯಾಗಿ ಹೇಳುವುದಾದರೆ, ನಮ್ಮ ನಿಮ್ಮ ವಾಸ್ತವ ಕೊಂಚ ಭಿನ್ನ‌. ಆದ್ದರಿಂದ ನಮಗ್ಯಾವ ಹಿಂಜರಿಕೆ ಬೇಡ.ಅದೊಂದು ನಿಸ್ತೇಜ ಬದುಕಲ್ಲ.
ಬದುಕೋಣ ನಮ್ಮೊಳಗಿನ ಪ್ರೀತಿಯ ಜಾಗೃತಿ ಮಾಡಿಕೊಂಡು. ಇದರಿಂದ ಒಂದಿಷ್ಟು ಹೃದಯ ಮಾನವೀಯ ಮೌಲ್ಯಗಳನ್ನು ಹೊಂದುವ ಗಳಿಗೆಗೆ ಸಾಕ್ಷಿಯಾಗಬೇಕು.ಆಸೆ ಕನಸುಗಳು ಕಮರುವಂತೆ ಬಿಡಬಾರದು.’ಅಭಿಮಾನ’ಹುಚ್ಚೆದ್ದು ಕುಣಿಯುವ ಸಂಪ್ರದಾಯ ನಮ್ಮದಾಗಬಾರದು.ಜೀವಿಗಳು ಪರಸ್ಪರ ಜೀವಿಸಲು ಅವಕಾಶ ನೀಡುವುದನ್ನು ಕಲಿಯಬೇಕಿದೆ..ಸತ್ತವರು ಯಾರೋ ಆದರೆ ಮನಸ್ಸು ಮಾತ್ರ ಒಂದು ಕ್ಷಣ ವಿಲವಿಲವೆಂದು ಒದ್ದಾಡಿತು.ಅಯ್ಯೋ ವಿಧಿಯೇ ಎಂದು ದೂರಿದ್ದು ಉಂಟು.ಮನುಷ್ಯ ಸಂಘ ಜೀವಿ ಎನ್ನುವುದನ್ನು ಮರೆತಷ್ಟು ಅಪಾಯ.ರಕ್ಷಕ,ಭಕ್ಷಕ ಇವೆರಡರ ನಡುವಿನ ಸಂಬಂಧವನ್ನು ಅರಿತಷ್ಟು ಒಳಿತು..ನಾವು ಹಣದ ಮತ್ತು ಅಭಿಮಾನದ ಹಿಂದೆ ನಾವು, ಅಭಿಮಾನವೆಂಬ ಮೌಲ್ಯವನ್ನು ಗಾಳಿಗೆ ತೂರಿ..ಯಾವುದು ಸಂಬಂಧವಿಲ್ಲ ಎಂದು ಮೈರೆತರೇ ಉಳಿಗಾಲವಿಲ್ಲ…ಅತ್ತು…ಓಂ ಶಾಂತಿ ಎಂದು ಟೈಪ್ ಮಾಡಿ ವಾಟ್ಸಪ್ ತುಂಬ ಹರಿದಾಡಿದರೆ ಅವತ್ತಿನ ಕಾಯಕ ಮುಕ್ತಾಯ…ಯಾವುದು ತಿಳಿದಷ್ಟು ಸುಲಭವಲ್ಲ..ಅನುಷ್ಠಾನಕ್ಕೆ ಮುಂದಾದಾಗ ಮಾತ್ರ ಅದರ ಬೆಲೆ ತಿಳಿಯುವುದು..ತಾಳ್ಮೆಯ ಉಡುಪು ನಮ್ಮದಾದಾಗ ಮಾತ್ರ….


3 thoughts on “

  1. ವಿಧಿಯಾಟದ ಲೇಖನ ಸುಂದರವಾಗಿ ಮೂಡಿ ಬಂದಿದೆ

  2. ತಾಳ್ಮೆ ತುಂಬಾ ಅವಶ್ಯಕ.ಲೇಖನ ಚೆನ್ನಾಗಿದೆ
    ಮೇಡಂ

Leave a Reply

Back To Top