ಅಪ್ಪನ ದಿನದ ವಿಶೇಷ
ಚಿನ್ನಸ್ವಾಮಿ ಎಸ್ ಹೆಚ್
ಇವರೇ ನಮ್ಮಪ್ಪ

ನನ್ನ ಜೀವಕ್ಕೆ ಒಡೆಯ
ಬದುಕಿನ ನಾಯಕ
ಮಗನ ಆತ್ಮೀಯ ಗೆಳೆಯ
ನಮ್ಮ ದಿಕ್ಕು ಬದಲಿಸುವ ನಾಯಕ
ಉಸಿರಿಗೆ ಹೆಸರು ತಂದುಕೊಟ್ಟ ಆಶಾದಾಯಕ
ಇವರೇ ನಮ್ಮಪ್ಪ….
ನೀನು ಹರಿಸಿದ ಬೆವರಿನ ಹನಿ
ನನ್ನ ಬೆಳವಣಿಗೆ ಶ್ರೇಷ್ಠ ಮುತ್ತಿನ ಗಣಿ
ನನ್ನ ಜೀವ ಜೀವನಕ್ಕೆ ಆಶ್ರಯದಾತ
ಬದುಕಿನ ಬವಣೆಯ ನೀಗಿಸಿದಾತ
ಇವರೇ ನಮ್ಮಪ್ಪ….
ಇವರು ಎಲ್ಲರಂತಲ್ಲ ಮನದ ನೋವಿನ ಜೊತೆ ಹೋರಾಡುವ ಸೈನಿಕ
ಮನೆಯವರ ಪಾಲಿನ ಕೂಲಿ ಕಾರ್ಮಿಕ
ಮನೆ ಮಂದಿಗೆಲ್ಲ ಸೇವಕ
ಪ್ರಾರ್ಥನೆ ಮಾಡದೆ ನೀಡುವ ಶ್ರಮದ ಧನಿಕ
ಇವರೇ ನಮ್ಮಪ್ಪ…..
ತನ್ನ ಹೆಗಲ ಮೇಲೆ ಹೊತ್ತು
ಬದುಕಿಗೆ ಪ್ರೀತಿ ವಿಶ್ವಾಸದ ಬೀಜವ ಬಿತ್ತು
ಅರಿವಿಲ್ಲದ ನನ್ನ ಬದುಕಿಗೆ ಆದ ಮುತ್ತು
ಜೀವನ ಪಾಠವ ಕಲಿಸಿ ಧರಿಸಿದ ಗತ್ತು
ಇವರೇ ನಮ್ಮಪ್ಪ…….
ಕಡಲ ಉದರದಲ್ಲಿ ಅಡಗಿರುವ ಮುತ್ತಿನಂತೆ
ಬಿಸಿಲಿನ ಬೇಗೆಯಲ್ಲಿ ಅರಿವಿಲ್ಲದೆ ಹರಿಯುವ ಬೆವರಿನಂತೆ
ತಪ್ಪು ಒಪ್ಪುಗಳ ಮನ್ನಿಸುವ ಗುರುವಿನಂತೆ
ಕಬ್ಬಿನಲ್ಲಿ ಹಡಗಿರುವ ಸಿಹಿ ನೀರಿನಂತೆ
ಇವರೇ ನಮ್ಮಪ್ಪ….
ಚಿನ್ನಸ್ವಾಮಿ ಎಸ್, ಹೆಚ್
Very nice Excellent
ಶುಭವಾಗಲಿ ಗೆಳೆಯ ಅತ್ಯುತ್ತಮವಾಗಿದೆ
ಅತ್ಯುತ್ತಮವಾಗಿದೆ ನಿಮ್ಮ ಕವನ
ಥ್ಯಾಂಕ್ಸ್ ಸರ್
Super Sir
sir