ʼಅಬಲೆʼ ಗೀತಾ ಆರ್ ಅವರ ಕವಿತೆ

ನಾನೇಕೆ ಅಬಲೆಯಾಗಿರುವೆ ಈಗ
ಇರುವರೆಲ್ಲರೂ ಎನಗೆ ಬಂಧುಗಳೇ
ರಕ್ಷಕರೇ ಭಕ್ಷಕರು ಆಗಿರುವರಿಲ್ಲಿ

ಕಾಮುಕ ಅಸುರರೇ ಇಲ್ಲಿ ಎಲ್ಲಾ
ಮತ್ತೆಂದೂ ಜನನವಾಗದಿರಲಿ
ಹೆಣ್ಣಾಗಿ ಕಟುಕರ ಲೋಕದಲ್ಲಿ

ಅಬಲೆಯಾದಳೆ ಹೆಣ್ಣು ಇಲ್ಲೀಗ
ಕೆಟ್ಟ ಜನರೇ ದೇವ ಲೋಕದಲ್ಲಿ
ನಿರ್ಮಿಸು ಲೋಕವೊಂದೆನಗೆ

ಕಿತ್ತು ತಿನ್ನುವರೇಲ್ಲಾ ಕಾಮುಕರು
ನೀ ರಚಿಸಿದ ಈ ಮಾಂಸಮುದ್ದೆ
ಸಾಕು ಈ ಹೆಣ್ಣಿನ ಜನುಮವೇ

ದಣಿವಾಗಿದೆ ಎನ್ನಾ ಒಡಲಲೆಲ್ಲಾ
ನಿಲ್ಲಲು ತ್ರಾಣವೇ ಇಲ್ಲಾದಾಗಿದೆ
ರಕ್ಷಿಸು ದೇವರೇ ಬಂದು ನಿನೋಮ್ಮೆ

ರಕ್ತಸಿಕ್ತವಾಗಿ ಸೋರುತ್ತಾಲಿದೆ
ನನ್ನೆದೆಲೀ ಹಾಲುಣಿಸಲಾಗುತ್ತಿಲ್ಲ
ಕರುಳಕುಡಿ ಎಳೆ ಕಂದಮ್ಮಗಳಿಗೆ

ಶಿಕ್ಷಿಸು ಬಾ ಕಾಮುಕರನ್ನೆಲ್ಲಾ
ಮಾನವಜಾತಿಯ ರಕ್ಕಸರವರು
ನೀನೊಮ್ಮೆ ರಕ್ಷಿಸು ಬಾ ದೇವರೇ
ತಬ್ಬಲಿಯಾದ ಅಬಲೆಯರನ್ನೆಲ್ಲಾ

—————-

One thought on “ʼಅಬಲೆʼ ಗೀತಾ ಆರ್ ಅವರ ಕವಿತೆ

  1. % ಸತ್ಯ ಸುಂದರ ನುಡಿಗಳು ಹೇ ಪರಮಾತ್ಮ ದೇವರೇ ಕಾಮುಕರನ್ನು ಶಿಕ್ಷಿಸು ನೊಂದ ಜೀವಕ್ಕೆ ತಂಪೆರೆಯುವ ಬಣ್ಣಿ

Leave a Reply

Back To Top