ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ತುಟಿ ಅಂಚಲಿ ಮಾತು ನಿಲ್ಲಿಸಿ
ಕಣ್ಣನೋಟದಿ ಎಲ್ಲ ಹೇಳುವ
ನಿನ್ನೊಲವಿನ ಗಮ್ಮತ್ತಿನ ಮತ್ತು
ತಿಳಿಯಲಿಲ್ಲ ಗೆಳತಿ ನನಗೆ|

ಗೆಳೆತನದ ಪೋಷಾಕಿನಲಿ
ಪ್ರೀತಿ ಹೂವ ಚಿತ್ರ ಬರೆದು
ಮೈಮನಕ್ಕಂಟಿಸಿಕೊಂಡ
ನಿನ್ನ ಅರಿಯಲಿಲ್ಲ ಗೆಳತಿ|

ಮಾತಿನ ಸಂತೆಯೊಳು
ಬಿರುಸು ಬಾಣದೇಟು ತಾಗಿ
ನೋವ ಗಾಯದಿ ನರಳಿದ ನಿನ್ನ
ತಾಳ್ಮೆ ಅರ್ಥವಾಗಲಿಲ್ಲ ಗೆಳತಿ|

ನಿನ್ನೆಲ್ಲ ಗಳಿಗೆಗಳನು
ಎನಗಾಗಿ ಕಾಪಿಟ್ಟು
ಮಿಡಿದ ಹೃದಯದ ಸದ್ದು
ಕೇಳಿಸಲಿಲ್ಲವಲ್ಲ ಗೆಳತಿ |

ಎನ್ನ ಮನದ ದಾರಿ ತೊರೆದು
ಅನ್ಯದಾರಿಯಲಿ ನಡೆಯುತ್ತಿದ್ದರೂ
ನೆನಪಾಗುತ್ತಲಿವೆ..ಆ ಹೆಜ್ಜೆಗಳು
ನಿನ್ನ ಗೆಜ್ಜೆಯ ನಾದದೊಂದಿಗೆ|


   

About The Author

1 thought on ““ನೆನಪ ಹೆಜ್ಜೆಗಳು” ಕವಿತೆ ಗಂಗಾ ಚಕ್ರಸಾಲಿ”

Leave a Reply

You cannot copy content of this page