ಗೀತಾ ಆರ್.‌ ಅವರ ಕವಿತೆ-ಮುಂಜಾನೆ

ಮುಂಜಾನೆ ಬಾನಲ್ಲಿ ಸೂರ್ಯನು  
ಉದಯಿಸಿ ತನ್ನ ಕಿರಣಗಳಿಂದ
ಬೆಳಕನ್ನೇಲ್ಲಾ ಪಸರಿಸುವಂತೆ

ನೀನೆನ್ನಾ ಕಂಡಾಗ ಮಿಂಚೊಂದು
ಮಿಂಚಿ ನನ್ನ ಕಣ್ಣಾ ಸೇರಿತಲ್ಲಾ ನಿನ್ನ ಕಮಲದಂತ ಕಣ್ಣುಗಳಿಂದ

ರವಿಯ ಕಿರಣಗಳಿಗೆ ಮಂಜು
ಕರಗಿ ನೀರಾಗಿ ಗಿಡ ಬಳ್ಳಿಗಳಿಂದ
ಹನಿಗಳಾಗಿ ತೊಟ್ಟಿಕ್ಕುವಂತೆ

ಮುಂಜಾನೆ ನೀ ಮಿಂದು ಬಂದು
ನಿಂತಾಗ ಆ ನಿನ್ನ ಮುಡಿಯಿಂದ
ನೀರಾ ಹನಿ ತೊಟ್ಟಿಕ್ಕುತ್ತಿವೆಯಲ್ಲಾ

ಮುಂಜಾನೆ ಗುಡಿಯಲ್ಲಿ ಗಂಟೆ
ಶಬ್ದವು ಇಂಪಾಗಿ ಪ್ರತಿಧ್ವನಿಸಿ
ನಾದವೊಂದು ಮೊಳಗುವಂತೆ

ನೀ ತೊಟ್ಟಿರುವ ಕೈಬಳೆಗಳ ಸದ್ದು
ಸಂಗೀತದಂತೆ ಗಲ್ ಗಲ್ ಎಂದು ನನ್ನ
ಹೃದಯ ವೀಣೆಯ ಮೀಟಿದೆಯಲ್ಲಾ

ನದಿಯು ಜುಳುಜುಳು ಎಂದು
ತಂಪಾಗಿ ಇಂಪಾಗಿ ಹರಿಯುತಿದೆ
ನಿಸರ್ಗವೇ ಮೈ ಮರೆಯುವಂತೆ

ನಿನ್ನ ನಡಿಗೆಯ ಕಾಲ್ಗೆಜ್ಜೆಯಾ
ಜಲ್ ಜಲ್ ಎಂಬ ಸದ್ದಿಗೆ ನನ್ನ
ಈ ಮನವು ಮೈ ಮರೆತು ನಿನ್ನ
ಪ್ರೀತಿಗೆ ಸೋಲುತ್ತಿದೆಯಲ್ಲಾ.


Leave a Reply

Back To Top