ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್

ಮನದುಂಬಿ ಪ್ರೀತಿಸಿದರೂ ಮನಸಾರೆ
ದ್ವೇಷಿಸಲ್ಪಟ್ಟೆ ಅದೆಷ್ಟೋ ಬಾರಿ
ತಲೆಬಾಗಿ ಆದರಿಸಿದರೂ ಅತಿಯಾಗಿ
ಅವಮಾನಿಸಲ್ಪಟ್ಟೆ ಅದೆಷ್ಟೋ ಬಾರಿ
ಕೊಟ್ಟಿದ್ದೇ ಮರಳಿ ಬರುವುದು ,
ಎಂಬುದು ಅತಿರೇಕದ ಸುಳ್ಳು
ಹಂಬಲಿಸಿ ಹೊಗಳಿದರೂ ನಿಖರವಾಗಿ
ನಿಂದಿಸಲ್ಪಟ್ಟೆ ಅದೆಷ್ಟೋ ಬಾರಿ
ನನ್ನವರು ಪರರು ಎಂಬ ಭೇದವಿಲ್ಲ
ಕತ್ತಿಯ ಅಲುಗಿಗೆ
ಹೂವಂತೆ ಮುದ್ದಿಸಿದರೂ , ಮುಳ್ಳಂತೆ
ದೂರವಿರಿಸಲ್ಪಟ್ಟೆ ಅದೆಷ್ಟೋ ಬಾರಿ
ಪ್ರೀತಿಯೆರೆದು ಪೋಷಿಸಿದ ಬಳ್ಳಿಯಲಿ
ಇಂದಿಗೂ ಹೂವರಳೇ ಇಲ್ಲ
ನಾ ವರವೆಂದು ಪೂಜಿಸಿದವರಿಂದಲೇ
ಪರಿ ಪರಿಯಾಗಿ ಶಪಿಸಲ್ಪಟ್ಟೆ ಅದೆಷ್ಟೋ ಬಾರಿ
ಕಾಳಜಿಯ ಬುತ್ತಿ ಬಿಚ್ಚಿಟ್ಟು ಎಲ್ಲರಿಗೂ
ಹುಲುಸಾಗಿ ಹಂಚುತಿದ್ದೆ
ತುಸು ಪ್ರೀತಿಗಾಗಿ ಹಪಹಪಿಸಿದರೂ
ಬರಿಗೈಯ್ಯಲ್ಲೇ ಕಳುಹಿಸಲ್ಪಟ್ಟೆ ಅದೆಷ್ಟೋ ಬಾರಿ
ವಾಣಿ ಯಡಹಳ್ಳಿಮಠ

Very beautiful explained the pain ..
Thank you so much