ಗಜಲ್‌ ಜುಗಲ್‌ಬಂದಿ- ವೈ.ಎಂ .ಯಾಕೊಳ್ಳಿ ಮತ್ತು ಅರುಣಾ ನರೇಂದ್ರ

 ಸತ್ತವನು‌ ನಾನು‌ ಮತ್ತೆ ಸಾಯಿಸುವುದು‌ ನಿನಗೇನು‌ ಹೊಸತಲ್ಲ‌ ಬಿಡು
ನೊಂದವನು ನಾನು‌‌ ಮತ್ತೆ ನೋಯಿಸುವದು‌ ನಿನಗೇನು ಹೊಸತಲ್ಲ‌ ಬಿಡು

ಹೊಸ ಹೊಸ‌ಮಾತುಗಳ ಖಜಾನೆಯೆ ‌ನಿನ್ನ ಬಳಿ ಕಾಲು‌ ಮುರಿದು‌ ಬಿದ್ದಿದೆ
ಹೊಸ ಹೊಸ‌ ನೆವಗಳ ಹೇಳಿ ಯಾಮಾರಿಸುವದು‌ ನಿನಗೇನು ಹೊಸತಲ್ಲ‌ ಬಿಡು

ಮೊದಲೇ ಮೂರ್ಖ ಮತ್ತೆ‌ ಮತ್ತೆ‌ ಮೂರ್ಖನಾಗುವ ಖಯಾಲಿ ನನ್ನದು
ಹೇಳಿಲೇನಿದೆ ನನ್ನ ಬಳಿ ಮಾತು ಮರೆಸುವದು‌ ನಿನಗೇನುಹೊಸತಲ್ಲ ಬಿಡು

ಸಾಗರ ಸಾಗರಗಳೇ ನಿನ್ನ ಸೆಳವಿಗೆ ದಂಗಾಗಿವೆ ಚಿಕ್ಕಕೆರೆಯಲಿ ಕಾಲು ಬಡಿದವನು
ಈಜಲಾರದ ಮೂಢ ನಡು ನೀರಲಿ ಕೈ ಬಿಡುವದು‌ ನಿನಗೇನು ಹೊಸತಲ್ಲ‌ ಬಿಡು

ಜೋಗಿ ಮೂರ್ಖನಾಗಿರಬಹುದು ಮೋಸದ ದಾರಿಯನು ಒಲ್ಲದವನು
ಕೆಡವಿದಲ್ಲಿಯೆ ಕೆಡಹಿ ನಗುತಹೋಗುವದು
ನಿನಗೇನು‌ ಹೊಸತಲ್ಲ ಬಿಡು

Leave a Reply

Back To Top