ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ನಿನಗಿದೋ ನಮನ..

ಗೇಣು ಹೊಟ್ಟೆ ತುಂಬಲು
ಭೂಮಿ ಭಾರದಂಥ
ದುಡಿಯುವ ಬಡಪಾಯಿ
ಜೀವ ಸವೆಸುವ ಶ್ರಮಿಕ
ನಿನಗಿದೋ ನಮನ…
ಮಳೆ ಬಿಸಿಲು ಚಳಿ ಎನ್ನದೆ
ಕಷ್ಟಗಳ ಸಹಿಸುತಲಿ
ಮೈಯ ರಕುತದ ಹನಿ ಹನಿ
ಬೆವರಾಗಿ ಸುರಿಸುವ ಕಾರ್ಮಿಕ
ನಿನಗಿದೋ ನಮನ…
ಲಾಭಕೋರರ ಏಳಿಗೆಗೆ
ತುತ್ತು ಕೂಳಿಗಾಗಿ ಶ್ರಮಿಸುವ
ಪ್ರಾಣವನೇ ಪಣಕಿಟ್ಟು
ಶೋಷಣೆಯ ಸಹಿಸುವ
ಸಿರಿವಂತರ ಕಾರ್ಖಾನೆಗಳ
ಗೋದಾಮುಗಳ ತುಂಬಿ
ಸೂರಿಲ್ಲದ ಬದುಕ ಸಾಗಿಸುವ
ಕಾರ್ಮಿಕನೇ..ನಿನಗಿದೋ ನೂರು ನಮನ….
ಹಮೀದಾ ಬೇಗಂ ದೇಸಾಯಿ

ಚೆನ್ನಾಗಿದೆ