ಕಾವ್ಯ ಸಂಗಾತಿ
ಮಧುಮಾಲತಿ ರುದ್ರೇಶ್
́ಒಲವಿನ ತುಂತುರುʼ


ನಿನ್ನ ನೆನಪ ಮಳೆಯಲಿ ನಾ ತೋಯುತಿಹೆ
ಸಖ ನಿನ್ನ ನೆನೆ ನೆನೆದು ಸುಖಿಯಾಗಿ ಹಾಡುತಿಹೆ
ಹಿತವಾಗಿದೆ ಈ ಭಾವ ಬಿಡದೆ ಸುರಿವ ಮಳೆಯಂತೆ
ಸವಿಯಾದ ನೋವಿದೆ ಸುಡುಬಿಸಿಲಲು ತಂಗಾಳಿಯಂತೆ
ಕಾಡುವ ಈ ಪರಿಯ ಮಾಯೆಗೆ ಬೆರಗಾದೆ
ಸುತ್ತಿ ಸುಳಿವ ನಿನ್ನೊಲವ ಮೋಡಿಗೆ ಮನ ಸೋತಿದೆ
ಮುಚ್ಚಿದ ಕಣ್ಣೆವೆಯಲು ನಿನ್ನದೇ ಬಿಂಬ
ಒಲವ ಸಂಪಿಗೆಯ ಘಮಲು ಎದೆಯ ತುಂಬ
ಒಲವ ಪಲ್ಲವಿಯ ಹಾಡುತಿದೆ ಮನ ಹಿತವಾಗಿ
ಹಾಡುವೆ ನಾ ನಿನ್ನೆದೆಯ ಸ್ವರಕೆ ಸ್ಪೂರ್ತಿಯಾಗಿ
ಸೊಗದಿ ಸುರಿಯುತಿದೆ ಈ ಒಲವ ತುಂತುರು
ನೀನಿರಲು ಜೊತೆ ಎದೆಯಂಗಳವೆಲ್ಲ ಹಸಿರು
ಮಧುಮಾಲತಿರುದ್ರೇಶ್

ತುಂಬು ಧನ್ಯವಾದಗಳು ತಮಗೆ