ವಿಶ್ವ ರಂಗಭೂಮಿ ದಿನಾಚರಣೆ – ʼರಂಗಭೂಮಿಯ ವೈಶಿಷ್ಟ್ಯ‌ʼ ವಿಶೇಷ ಲೇಖನ ಗಾಯತ್ರಿ ಸುಂಕದ್

ಪ್ರತಿ ವರ್ಷ ಮಾರ್ಚ್ 27 ತಾರೀಖು ವಿಶ್ವ ರಂಗಭೂಮಿ ದಿನವನ್ನಾಗಿ ಆಚರಿಸಲಾಗುತ್ತಿದೆ.  ರಂಗಭೂಮಿ ನಮ್ಮ ಕಲೆ ಮತ್ತು ಸಂಸ್ಕೃತಿಗೆ ತನ್ನದೇ ಆದ ಕೊಡುಗೆ ನೀಡಿದೆ. ಟೀವಿ,  ಸಿನೆಮಾ ಬರುವುದಕ್ಕಿಂತ ಮುಂಚೆ ಜನ ತಮ್ಮ ಮನರಂಜನೆಗೆ ರಂಗಭೂಮಿಯನ್ನು ಆಶ್ರಯಿಸಿದ್ದರು. ಹಳ್ಳಿಗಳಲ್ಲಿ ,ಜಾತ್ರೆಗಳಲ್ಲಿ ಈಗಲೂ ಜನ ತಂಡ ಕಟ್ಟಿಕೊಂಡು ನಾಟಕ ಆಡುವುದನ್ನು ಕಾಣಬಹುದು. ಮೊದಲು ನಾಟಕಗಳು ಪೌರಾಣಿಕ ಕಥೆಯ ಮೇಲೆ ಆಶ್ರಯಿಸಿದ್ದು ರಾಮಾಯಣ ಮತ್ತುಮಹಾಭಾರತಗಳ ಕಥೆಯನ್ನು ಆಧರಿಸಿ ತಯಾರಾಗುತ್ತಿದ್ದವು.
ನಂತರ ಸಂತರ, ಪವಾಡ ಪುರುಷರ ಜೀವನ ಆಧರಿಸಿದ ನಾಟಕಗಳು ತಯಾರಾದವು.  “”ಜಗಜ್ಯೋತಿ ಬಸವೇಶ್ವರ, ಸಂತ ಶಿಶುನಾಳ ಶರೀಫ, ಕುಮಾರರಾಮ,  “”  ಮುಂತಾದ ನಾಟಕಗಳು ಪ್ರದರ್ಶನ ಕಂಡವು.
ಇಂಗ್ಲೆಂಡನ್ನು ವಿಶ್ವ ರಂಗಭೂಮಿಯ ತವರುಮನೆ ಎಂದು ಹೇಳ ಬಹುದು.ಶೇಕ್ಸ್ ಪಿಯರ್ ನಾಟಕ ರೋಮಿಯೋ  ಜೂಲಿಯೆಟ್, ಹ್ಯಾಮ್ಲೆಟ್  ಮುಂತಾದ ನಾಟಕಗಳು ಬೇರೆ ಭಾಷೆಗಳಿಗೆ ಸಹ ಅನುವಾದ ಗೊಂಡವು.
ಭಾರತದಲ್ಲಿ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಸ್ಥಾಪನೆಯಾಗಿ ಭಾರತೀಯ ರಂಗಭೂಮಿಗೆ ತನ್ನದೇ ಆದ  ಕೊಡುಗೆ ನೀಡಿದೆ.
ಕನ್ನಡ ರಂಗಭೂಮಿ ಸಹ ಯಾರಿಗೂ ಕಡಿಮೆಯಿಲ್ಲ ಎನ್ನುವಂತೆ ಬೆಳೆದು ನಿಂತಿದೆ. K.V. ಸುಬ್ಬಣ್ಣ, B.V.ಕಾರಂತ್  ರಂಗಭೂಮಿಯ ದೈತ್ಯ ಪ್ರತಿಭೆ ಗಳು ಎಂದು ಹೇಳಬಹುದು. ನೀನಾಸಂ, ರಂಗಾಯಣ ಅಪಾರ ರಂಗಭೂಮಿ ಕಲಾವಿದರನ್ನು ಸೃಷ್ಟಿ ಮಾಡಿವೆ.


ಗಿರೀಶ್ ಕಾರ್ನಾಡ್ ರ “ತುಘಲಕ್, ತಲೆದಂಡ, ಹಯವದನ  ನಾಟಕಗಳು ಮೇರು ಸೃಷ್ಟಿಗಳಾಗಿವೆ.
 ಇನ್ನು ವೃತ್ತಿ  ನಾಟಕ ಕಂಪನಿಗಳು  ರಂಗಭೂಮಿ ಯತ್ತ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ.
P.B. ಧುತ್ತರಗಿ ಯವರ  ,””ಪಟ್ಟಣಕ್ಕೆ ಬಂದ ಪತ್ನಿಯರು”” ನಾಟಕ ಕನ್ನಡ ಸಿನೆಮಾ ಆಗಿ ಕೊನೆಗೆ ಹಿಂದಿಗೆ ಸಹ ರಿಮೇಕ್ ಆಯಿತು. ರಾಜ್ ಕಪೂರ್ ರ ತಂದೆ ಪ್ರಥ್ವಿ ರಾಜ್ ಕಪೂರ್  ಆ ರಿಮೇಕ್ ಸಿನೆಮಾದಲ್ಲಿ  ನಟಿಸಿದರು. Dr ರಾಜ್ ಕುಮಾರ್, ನರಸಿಂಹರಾಜು, , ಉಮಾಶ್ರೀ, ಮುಂತಾದವರು ರಂಗಭೂಮಿಯ ಹಿನ್ನಲೆಯಿಂದ ಬಂದವರೇ.  ಚಿಂದೋಡಿ ಲೀಲಾ, ರಾಜಣ್ಣ ಜೇವರ್ಗಿ, N.ಬಸವರಾಜು ಗುಡಗೇರಿ ,ಗುಬ್ಬಿ ನಾಟಕ ಸಂಘ ಮುಂತಾದವುಗಳು ವೃತ್ತಿ ರಂಗಭೂಮಿಯ ಯಶಸ್ವಿಯಾದ ಉದಾಹರಣೆ ಗಳಾಗಿವೆ.


ಚಿಂದೋಡಿ ಲೀಲಾ ನಿರ್ದೇಶನ ಮತ್ತು ಅಭಿನಯದ   “”ಪೊಲೀಸನ ಮಗಳು,”” ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡಿತು. ಯಶವಂತ್ ಸರದೇಶಪಾಂಡೆ ಅವರ “”ಆಲ್ ದಿ ಬೆಸ್ಟ್”” ನಾಟಕ  ಜನರನ್ನು ಸೂರೆ ಗೊಂಡಿತು. “” ಖಾನಾವಳಿ ಚನ್ನಿ, ಬಸ್ ಕಂಡಕ್ಟರ್,  ಕುಂಟ ಕೋಣ, ಮೂಕ ಜಾಣ ಮುಂತಾದ ನಾಟಕಗಳು ಟೀವಿ, ಮತ್ತು ಸಿನೆಮಾಗಳ ಆಕರ್ಷಣೆಯ ನಡುವೆಯಲ್ಲಿ ಸಹ ಪ್ರೇಕ್ಷಕರನ್ನು  ಮೋಡಿ ಮಾಡಿವೆ.
ಬನ್ನಿ, ರಂಗಭೂಮಿ ಕಲೆಯನ್ನು ಬೆಳೆಸಿ ತೋರಿ ಸೋಣ.
———————————————————————————–

2 thoughts on “ವಿಶ್ವ ರಂಗಭೂಮಿ ದಿನಾಚರಣೆ – ʼರಂಗಭೂಮಿಯ ವೈಶಿಷ್ಟ್ಯ‌ʼ ವಿಶೇಷ ಲೇಖನ ಗಾಯತ್ರಿ ಸುಂಕದ್

  1. ರಂಗಭೂಮಿ ದಿನಾಚರಣೆಯ ಪ್ರಯುಕ್ತ ಬರೆದ ಲೇಖನ ಉತ್ತಮ ಮಾಹಿತಿಯೊಂದಿಗೆ ಸಮಯೋಚಿತವಾಗಿದೆ. ಅಭಿನಂದನೆಗಳು ಮೇಡಂ

Leave a Reply

Back To Top