ಕಾವ್ಯ ಸಂಗಾತಿ
ರಾಜು ನಾಯ್ಕ
ಶಾಯರಿಗಳು

ದೇವರಲ್ಲಿ ಹೆಚ್ಚು ಆಯಸ್ಸು ಕೇಳಿದ್ದು ನನಗಾಗಿ
ಅದರಲ್ಲಿ ಬಹುತೇಕ ದಿನ ದಾರಿ ಕಾದಿದ್ದು ನಿನಗಾಗಿ
ಗುಡಿಯಲ್ಲಿ ಬಾಡಿದ ಹೂವು ಪ್ರಸಾದವಾಗಿತ್ತು ಮಾಯೆ
ಎದೆಯಲ್ಲಿ ಒಲವಿನ ಹೂವು ಬಾಡಿತ್ತು ನೆನಪಿನ ಛಾಯೆ
ಅನ್ನ ತಿನ್ನುವಾಗ ಕೈ ಮುಗಿದೆ ಅದು ಯಾರದ್ದೋ ಬೆವರು
ತುತ್ತನ್ನು ಹಂಚಿ ಕೊಟ್ಟೆ ಅದರಲ್ಲಿ ಬರೆದಿತ್ತು ತಿನ್ನುವವನ ಹೆಸರು
ಕತ್ತಲಾಗ ನಡೆಯುತ್ತಿದ್ದೆ ಗುರಿ ಇತ್ತು
ದಾರಿ ತುಂಬಾ ನಿನ್ನೊಲವ ಬೆಳಕಿತ್ತು
ಮಲಗಾಕ ಬಿಟ್ಟಿರಲಿಲ್ಲ ಆಗ ನಿನ್ನ ಪ್ರೀತಿ ತುಡಿತ
ಈಗ ಮಲಗಿನಿ ಎಳಾಕ ಬಿಡುತ್ತಿಲ್ಲ ನೆನಪಿನ ಸೆಳೆತ..
ಸ್ವರ್ಗಕ್ಕೆ ಹೊಂಟಿದ್ದೆ ದಾರಿ ತುಂಬಾ ಒಲವಿನ ಹೊಂಬೆಳಕು
ಸ್ವರ್ಗ ಇಲ್ಲೆ ಇದೆ ಎಂದು ಕರೆದಿತ್ತು ನಿನ್ನ ನಗುವಿನ ಬೆಳದಿಂಗಳು
————–
ರಾಜು ನಾಯ್ಕ
