ಅಸನದಿಂದ ಕುದಿದು ವ್ಯಸನದಿಂದ* ಬೆಂದು ಅತಿ ಆಸೆಯಿಂದ ಬಳಲಿ
ವಿಷಯಕ್ಕೆ ಹರಿಯುವ ಜೀವಿಗಳು ನಿಮ್ಮ ನರಿಯರು ಕಾಲ ಕಲ್ಪಿತ ಪ್ರಳಯ ಜೀವಿಗಳೆಲ್ಲ ನಿಮ್ಮ ನೆತ್ತಬಲ್ಲರಯ್ಯ ಚೆನ್ನಮಲ್ಲಿಕಾರ್ಜುನ

ಮಾನವನು ಒಂದು ಲಕ್ಷ 84  ಸಾವಿರ ಜೀವರಾಶಿಗಳಲ್ಲಿ ಮಾನವ ಅತ್ಯಂತ ಬುದ್ಧಿಶಾಲಿಯಾಗಿದ್ದಾನೆ. ಈ ಬುದ್ದಿವಂತಿಕೆಯು ಮಾನವನಿಗೆ ಅತ್ಯಂತ ಮಾರಕ .ಏಕೆಂದರೆ ಮಾನವ ಈ ಸಮಾಜದಲ್ಲಿ ಸ್ವಾರ್ಥ ಜೀವಿ. ತನ್ನ ಸ್ವಾರ್ಥದಿಂದ ಸಮಾಜದಲ್ಲಿ ಇರುವಂತಹ ವ್ಯಕ್ತಿಗಳೊಂದಿಗೆ ,ಅಸೂಯೆ, ಮದ, ಮತ್ಸರ ಇತ್ಯಾದಿ ವ್ಯಸನಕ್ಕೆ ಬಲಿಯಾಗಿ ತನ್ನ ಅಜ್ಞಾನದಿಂದ ದೇವರನ್ನು ತಾನೇ ದೇವರಾಗುವ ಶರಣ ತತ್ವವನ್ನು ಮರೆತು ಸಾಗುವಂತಹ ವ್ಯಕ್ತಿ. ತನ್ನರಿವನ್ನು ತನಗೆ ಕಾಣದಂತಹ ವ್ಯಕ್ತಿ. ಹಣದ ಹಿಂದೆ ಬಿದ್ದು ಮನುಷ್ಯತ್ವವನ್ನು ಮರೆಯುವಂತಹ ವ್ಯಕ್ತಿಯಾಗಿದ್ದಾನೆ ಎಂದು ಅಕ್ಕಮಹಾದೇವಿಯವರು ಈ ಒಂದು ವಚನದಲ್ಲಿ ತಿಳಿಯಪಡಿಸುತ್ತಾರೆ.

 ಅಸನದಿಂದ ಕುದಿದು ಮಾನವ ದುಡಿಯುವುದು ತನ್ನ ಹೊಟ್ಟೆಗಾಗಿಯೇ ,
ಇಲ್ಲಿ ಅಸನ ಎಂದರೆ ಆಹಾರ ಎಂದರ್ಥ. ಈ ಆಹಾರವನ್ನು ಸಂಪಾದಿಸಲಿಕ್ಕಾಗಿ ಮಾನವ ಅನೇಕ ರೀತಿಯಾಗಿ ತೊಂದರೆಗಳನ್ನು ಅನುಭವಿಸುತ್ತಾನೆ. ಈ ತೊಂದರೆಗಳಿಂದ ಪರಾಗಲು ಇನ್ನೊಬ್ಬರ ಮೇಲೆ ದ್ವೇಷ. ಮತ್ಸರ. ಹಗೆ ಮುಂತಾದ ವೈರ ಭಾವಗಳನ್ನು ತಾಳುತ್ತಾನೆ .ಹೀಗಾಗಿ ತನ್ನಲ್ಲಿರುವಂತಹ ಅರಿವಿನ ಗುರುವಿನ ಭಕ್ತಿಯನ್ನು ಕಾಣದೇ ಬಳಲುವಂತಹ ಪರಿಸ್ಥಿತಿಯನ್ನು ಮಾನವ ಹೊಂದಿ ದ್ದಾನೆ .ಅಕ್ಕಮಹಾದೇವಿಯವರು ವ್ಯಕ್ತಪಡಿಸುವಂತಹ ಮಾತು ನಿಜಕ್ಕೂ ಅರ್ಥಪೂರ್ಣವಾಗಿದೆ.

 ವ್ಯಸನ ದಿಂದ ಬೆಂದು
 ಅತಿ ಆಸೆಯಿಂದ ಬಳಲಿ ವಿಷಯಕ್ಕೆ ಹರಿಯುವ ಜೀವಿಗಳು

ಮಾನವನ ಮನ ಅನೇಕ ಆಸೆಗಳಿಂದ ತುಂಬಿದ ಮನ. ಈ ಆಸೆ ಎನ್ನುವ ವ್ಯಸನ ಅಂದರೆ ಚಟ,  ದುಃಖ , ತೊಂದರೆಗಳಿಂದ ತುಂಬಿದ ಮನ ಇಂದ್ರಿಯಗಳ ಸುಖಗಳನ್ನ ಹೊಂದಿದಂತ ಮನ. ರೂಪ, ರಸ, ಗಂಧ, ಸ್ಪರ್ಶ ಎನ್ನುವ ಜ್ಞಾನೇಂದ್ರಿಯಗಳು ಈ ವಿಷಯ ಸುಖಕ್ಕೆ ದಾಸನಾಗಿ ಮನಸ್ಸು ನೀರಿನಂತೆ ಹರಿದಾಡಿ ನಿಜವಾದ  ಸನ್ಮಾರ್ಗವನ್ನು ಕಾಣದೆ ಬಳಲುವಂತಹ ಮಾನವ ,ಅನೇಕ ರೀತಿಯಾದಂತಹ ದುಃಖಕ್ಕೆ ರೆಡಿಯಾಗುತ್ತಾನೆ. ಉಗುರಿಗೆ ಹೋಗುವ ಕೆಲಸಕ್ಕೆ ಕೊಡಲಿಯನ್ನು ತೆಗೆದುಕೊಂಡಂತೆ, ಸಾಸಿವೆ ಕಾಳಿನ ಸುಖಕ್ಕೆ ಸಾಗರದಷ್ಟು ಕಷ್ಟವನ್ನು ಅನುಭವಿಸುವಂತಹ ಮಾನವ ಆಗಿದ್ದಾನೆ ಎನ್ನುವ ಅರ್ಥವನ್ನು, ಒಂದು ಸತ್ಯ ಮಾರ್ಗವನ್ನು, ಒಂದು ಕಹಿಯಾದಂತಹ ಒಂದು ಮಾನವನ ಸ್ವಭಾವವನ್ನು ತಿಳಿಯಪಡಿಸಿದ್ದಾರೆ.

 ಪರಿಶುದ್ಧವಾದ , ಪರಿಪೂರ್ಣವಾದಂತಹ ಜ್ಞಾನಿ, ಸನ್ಮಾರ್ಗವನ್ನು ಹೊಂದಿದಂತಹ ವ್ಯಕ್ತಿ, ತನ್ನರುವಿನ ಭಗವಂತನನ್ನು ಮರೆತು ಸಾಗಿ , ಅನೇಕ ಕಷ್ಟಕ್ಕೆ ಸಿಲುಕಿಕೊಂಡಿದ್ದಾನೆ. ಭಗವಂತನ ನಾಮಸ್ಮರಣೆ ಮಾಡುವ ಭಕ್ತರು
  ಈ ಸಮಾಜದಲ್ಲಿ ಅತೀ ವಿರಳ ಅದನ್ನೇ ಅಕ್ಕಮಹಾದೇವಿಯವರು ನನ್ನ ಚೆನ್ನಮ್ಮಲ್ಲಿಕಾರ್ಜುನ ಈ ರೂಪ ,ರಸ, ಗಂಧ ,ಸ್ಪರ್ಶ ಸುಖವನ್ನು ಗೆದ್ದಂತವನು.ಆತನಿಗೆ ಮೋಹವಿಲ್ಲ,ಚಟವಿಲ್ಲ , ದುಃಖ ವಿಲ್ಲ ಎನ್ನುವರು .

ಕಾಲಕ್ಕೆ ತಕ್ಕಂತೆ ಬದಲಾಗುವ ಮಾನವ ,ಈ ಕಾಲ ಎನ್ನುವ ಪ್ರಳಯದಲ್ಲಿ ಕೊಚ್ಚಿಕೊಂಡು ಹೋಗುವ ಮಾನವ ನಿಮ್ಮನ್ನು ಎತ್ತ ಬಲ್ಲರು .?
ನಾವು ಕಾಲ ಎನ್ನುವ ಪ್ರಳಯದಲ್ಲಿ ಸಿಲುಕಿಕೊಂಡಿದ್ದೇವೆ ಎನ್ನುವ ಪರಿಜ್ಞಾನ ಮಾನವನಿಗೆ ಇಲ್ಲವಾಗಿದೆ .ಹೀಗಾಗಿ ಹೇ ಚೆನ್ನಮಲ್ಲಿಕಾರ್ಜುನಾ ಕಾಲ ಎನ್ನುವ ಪ್ರಳಯವನ್ನು ತಡೆದು ನಿಲ್ಲಿಸುವ ಶಕ್ತಿ ನಿನ್ನಲ್ಲಿಯೇ ಇದೆ ಅದನ್ನು ಮರೆತು ಸಾಗುವ ಬುದ್ಧಿಗೇಡಿ ಮನುಜನಾಗಿದ್ದಾನೆ .

Leave a Reply

Back To Top