ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಮಾತಾಡಿದಷ್ಟು ಪ್ರೀತಿ ಖಾಲಿಯಾಗುವುದು
ಮಾತಿಗೆ ನಿಲುಕದ್ದು ಸಿಲುಕದ್ದು ಪ್ರೀತಿ
ಮಾತಿಗೆ ಒಲಿದ ಪ್ರೀತಿ ಮನೆಯ ತನಕ
ಮೌನಕ್ಕೆ ಸೆಳೆದ ಪ್ರೀತಿ ಕೊನೆಯ ತನಕ
*
ಬರೆದಷ್ಟು ಸುಲಭವಲ್ಲ
ಪ್ರೀತಿಯ ಹಾಡುವುದು
ಬರಹಕ್ಕೊ
ಹಾಡಿಗೋ
ಒಲಿಯುವುದಲ್ಲ ಪ್ರೀತಿ
ಮೌನಕ್ಕೆ ಅರ್ಥವಾಗುವುದು
ಪ್ರೀತಿಯ ರೀತಿ
*
ನಾನು ನೀನು
ಮಾತಾಡುತ್ತ ಕುಳಿತರೆ
ಪ್ರೀತಿ ನಿಡುಸುಯ್ಯುವುದು
*
ನೀನು ನಾನು ಮೌನಿಯಾದರೆ
ಪ್ರೀತಿ ಮಾತಾಡುವುದು
*
ಮೌನದಲ್ಲಿ ಲೋಕದ ಸಂಗೀತ ಕೇಳು
ಅದರಲ್ಲಿನ ಪರಿಶುದ್ಧ ಪ್ರೀತಿ ನೋಡು
ಆವರಿಸಲು ಬರುವ ಅದರ ಮೋಡಿ
ಅನುಭವಸಿದವರೆಲ್ಲ ಮೂಖರಾದರು
*
ಮಾತಾಡಿ ನಾವು ದೂರವಾಗುವುದು ಬೇಡ
ಮೌನವಾಗಿ ಅನುರಕ್ತರಾಗೋಣ
———————————————————————————–

About The Author

1 thought on “ಟಿ.ಪಿ.ಉಮೇಶ್ ಅವರ ಕವಿತೆ-ಒಲವೇ…”

Leave a Reply

You cannot copy content of this page