ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪ್ರಖ್ಯಾತ  ಇಂಗ್ಲಿಷ್ ನಾಟಕಕಾರ ಷೇಕ್ಸ್ಪಿಯರ್  ಅವರು  ಒಂದೊಳ್ಳೆ ಮಾತನ್ನು ಹೇಳಿದ್ದಾರೆ ಅದೇನು ಅಂದರೆ  :
” ಕೋಪಗೊಂಡಿರುವ  ಮಹಿಳೆಯೊಂದಿಗೆ ವಾಗ್ವಾದಕ್ಕೆ ಇಳಿಯುವುದು ಎಂದರೆ  ಅದು ಬಿರುಗಾಳಿಯ  ಸಮಯದಲ್ಲಿ  ಪತ್ರಿಕೆಯ ಪುಟಗಳನ್ನು ತಿರುಗಿಸಿ  ಓದಲು  ಪ್ರಯತ್ನಿಸಿದಂತೆಯೇ ಸರಿ ಎಂದೂ, ಆ ಸಮಯದಲ್ಲಿ  ಮುದ್ದು ಮಾಡಿ  ಅವಳನ್ನು ಅಪ್ಪಿಕೊಳ್ಳಿ, ತಂತಾನೇ ಅವಳು ಶಾಂತಳಾಗುತ್ತಾಳೆ !” ಎಂದು.
ಬಹಳಷ್ಟು ಜನಕ್ಕೆ ಇದು ಪ್ರಾಯೋಗಿಕ ಅನುಭವವೂ ಆಗಿರಬಹುದು, ಮುಂದುವರೆದು ಮಹಿಳಾ
ಮನೋವಿಜ್ಞಾನವು  ಮಹಿಳೆಯ ಕುರಿತು ಹೇಳಿರುವುದು ಏನೆಂದರೆ ಮಹಿಳೆಯ ಸಣ್ಣ ಪುಟ್ಟ ತಪ್ಪುಗಳನ್ನು ಕ್ಷಮಿಸದ ಪುರುಷನು ಅವಳಲ್ಲಿರುವ ಶ್ರೇಷ್ಠ ಸದ್ಗುಣಗಳನ್ನು ನೋಡಲು ಸಾಧ್ಯವಿಲ್ಲ ಎಂದು, ಒಬ್ಬ ಮಹಿಳೆ ಪುರುಷನ ನೆರಳಿನಲ್ಲಿ ಬದುಕಲು ಬಯಸುತ್ತಾಳೆ, ಆದರೆ  ಖಂಡಿತ ಅವನ ದಬ್ಬಾಳಿಕೆಯಲ್ಲಿ ಅಲ್ಲ. ಮಹಿಳೆಗೆ ನೀಡುವ ನಿಜವಾದ ಪ್ರೀತಿ ಎಂದರೆ  ಅವಳ ನ್ಯೂನತೆಗಳ ಹೊರತಾಗಿಯೂ ಅವಳನ್ನು ಪ್ರೀತಿಸುವುದೇ ಹೊರತು ಅವಳಪರಿಪೂರ್ಣತೆಗಳಿಂದಾಗಿ ಅಲ್ಲ.
ಒಬ್ಬ ಮಹಿಳೆ ತನ್ನನ್ನು ಪ್ರೋತ್ಸಾಹಿಸಿ, ಬೆಂಬಲಿಸುವ, ಸ್ನೇಹಿತನಂತಿರುವ ಪುರುಷನನ್ನು ಮಾತ್ರ ಮನಸಾರೆ ಪ್ರೀತಿಸುತ್ತಾಳೆ ಎಂದು ಹಾಗು ತನ್ನ ಬುದ್ಧಿಶಕ್ತಿ  ಮತ್ತು ವ್ಯಕ್ತಿತ್ವವನ್ನು ಅರಳಿಸುವ ಮತ್ತು ಅವಳ ಬಾಲ್ಯದ ಮುಗ್ಧತೆಯನ್ನು  ಮತ್ತೆ ಮತ್ತೆ ಪುನರುಜ್ಜೀವನಗೊಳಿಸುವ ಗೆಳೆಯನನ್ನು ಹೆಚ್ಚು  ಪ್ರೀತಿಸುತ್ತಾಳೆ ಎಂದು ಹೇಳುತ್ತದೆ . ಮಹಿಳೆ ಒಂದು ಸಂಗೀತ ವಾದ್ಯದಂತೆ, ಅವಳ ಹೃದಯದ ತಂತಿಗಳನ್ನು ಹೇಗೆ ಸ್ಪರ್ಶಿಸಬೇಕೆಂದು ತಿಳಿದಿರುವವ  ಮಾತ್ರ ಅದರಿಂದ ಸುಮಧುರ ನಾದ ಹೊಮ್ಮಿಸಬಲ್ಲ.
ಪುರುಷರೇ,  ನೀವು ಅವಳ ಗೆಳೆಯ, ಸಖ, ಸಂಗಾತಿಯಾಗಿರಿ ಅಷ್ಟೇ  ಸಾಕು ಎಲ್ಲವೂ ಸೌಖ್ಯವಾಗಿರುತ್ತದೆ ಎನ್ನುತ್ತದೆ  ಮಹಿಳಾ ಮನೋ ವಿಜ್ಞಾನ.

ಎಷ್ಟು ಜನಕ್ಕೆ ಇದರಲ್ಲಿ ಸಮ್ಮತಿಯಿದೆ, ಮತ್ತೊಂದು ಪ್ರಮುಖ ಅಂಶವನ್ನು ಬಿಟ್ಟಂತಿದೆ, ಯಾವುದು ಅದು ? 


About The Author

Leave a Reply

You cannot copy content of this page

Scroll to Top