ಕಾವ್ಯ ಸಂಗಾತಿ
ಚಂದ್ರು ಪಿ ಹಾಸನ್
ಕಾಣುವ ಹಂಬಲ

ಕೂಗಿದೆ ನನ್ನೆದೆ ಕೋಗಿಲೆ
ದರ್ಶಿಸಿ ನೀನೊಮ್ಮೆ ಸೇರೆಲೆ
ವಿರಹದ ಸೆಳೆತವೋ ಅರಿಯೇನು
ಸನಿಹಕೆ ಕೂಗಿ ಕೂಗಿ ಕರೆದೇನು
ಓ ಗೆಳತಿ ಕೇಳೇ ನನ್ನೊಡತಿ
ನನ್ನಲ್ಲಿ ನೀ ಸದಾ ಇರುತಿ
ಒಲವಿನ ಬಡಿತದಿ ಚಿಮ್ಮುತ್ತಿದೆ
ಚೆಲುವಿನ ಗೆಳತಿಯ ಕರೆಯುತ್ತಿದೆ
ಪಲ್ಲವಿ ತುಂಬಿದೆ ನಿನ್ನಸರೇ
ಚರಣದಿ ಸೂಸಿದೆ ನಿನ್ನುಸಿರೇ
ಓ ಗೆಳತಿ ನೀ ನನ್ನೊಡತಿ
ನನ್ನಲ್ಲಿ ನೀ ಸದಾ ನಗುತೀ
ನಿನ್ನನು ಕಾಣುವ ತುಡಿತದಿ
ಹೃದಯವು ಕದಡದೆ ಬಡಿಯುತ್ತಿದೆ
ಕಣ್ತುಂಬ ನಿನ್ನಯ ಬಿಂಬವಿದೆ
ಕಾಣುವ ಹಂಬಲ ಕೆಣಕುತ್ತಿದೆ
ಓ ಗೆಳತಿ ನೀ ನನ್ನೊಡತಿ
ನನ್ನಲ್ಲೇ ಸದಾ ನಲಿದಾಡುತಿ
ಸೊಂಪಾದ ಗಾಳಿಯು ಬೀಸಿದೆ
ಹೃದಯವು ತುಸು ಕಂಪಿಸಿದೆ
ಇಂಪಾದ ಧ್ವನಿಯ ಹಂಬಲಿಸಿದೆ
ಮಾಘ ಮಾಸವ ನಾ ತಡೆವೆ
ಆಗ ಕೋಗಿಲೆ ನೀ ಸದಾ ಕೂಗುವೆ
ನನ್ನೊಡತಿಯ ನೀ ಒಮ್ಮೆ ಕರೆವೇ
ನನ್ನರಸಿಯ ನೋಡುತ ನಾ ಮರೆವೆ
ಚಂದ್ರು ಪಿ ಹಾಸನ್
