ಕಾವ್ಯ ಸಂಗಾತಿ
ಕಾವ್ಯ ಪ್ರಸಾದ್
ಜೀವನ

ಮನುಷ್ಯ ತಾನು ತನ್ನ ಸ್ವಾರ್ಥಕ್ಕಾಗಿ ಬದುಕುತ್ತಾನೆ
ಬದುಕೆ ಜೀವನವೆಂದು ಅದರ ಬಗ್ಗೆ ಮಾತ್ರ ಚಿಂತಿಸುತ್ತಾನೆ!
ಆ ಬದುಕಿನ ಬೆಳಕು ಯಾರಾದರೇನು ಎನ್ನುವುದಿಲ್ಲ
ವ್ಯಕ್ತಿಗಳು ಬದುಕೆ ತಾನೇ ಎಂದು ಯಾಕೆ ಚಿಂತಿಸುವುದಿಲ್ಲ!!
ಎಲ್ಲರೂ ನಿಸ್ವಾರ್ಥದ ಬದುಕಿನ ಜೀವನ ನಡೆಸಬೇಕು
ಜನರ ನಡುವೆ ಪ್ರೀತಿ ಪ್ರೇಮ ಬಾಂಧವ್ಯವಿರಬೇಕು!
ಪ್ರತಿಯೊಬ್ಬರ ಬಾಳಲ್ಲೂ ಕತ್ತಲೆ ಕವಿದ ಮೋಡವೆ
ಗುಡುಗು ಮಿಂಚು ಆರ್ಭಟಗಳಿಲ್ಲದೆ ಮಳೆ ಸುರಿಯಲು ಸಾಧ್ಯವೆ!!
ಸುರಿದ ಮಳೆಯಿಂದ ಇಳೆ ಹೇಗೆ ತಂಪಾಗಿ ಸ್ವಚ್ಛವಾಗುತ್ತದೆ
ಮನಸು ಸಹ ಒಳ್ಳೆಯ ವಿಚಾರಗಳಿಂದ ಶುದ್ಧವಾಗುತ್ತದೆ!
ಪ್ರತಿ ಜೀವಿಯಲ್ಲು ಕಷ್ಟ-ಸುಖ ಮಾನ ಅಪಮಾನಗಳಿರುತ್ತದೆ
ದುಃಖದಲ್ಲಿ ಬೆಂದವರಿಗೆ ಮಾತ್ರ ಜೀವನದ ಪಾಠ ತಿಳಿಯುತ್ತದೆ!!
ನಾವು ಆಸೆ ಬಯಕೆಗಳ ಬಿಟ್ಟು ಜೀವಿಸಲಾಗುವುದಿಲ್ಲ
ಮನುಷ್ಯತ್ವವಿಲ್ಲದ ಕಡೆ ವಾಸಿಸಲು ಸಾದ್ಯವಿಲ್ಲ!
ತಾನೆಷ್ಟು ದುಡಿದು ಬೆಳೆದರೇನು ಕೋಟೆ ಕಟ್ಟಿದರೇನು
ಮಾನವತ್ವವನ್ನು ಮರೆತು ಮೆರೆದರೆ ಕೊನೆಗೆ ಸಿಗುವುದೇನು!!
ಕಾವ್ಯ ಪ್ರಸಾದ್
