ನಿಜಗುಣಿ ಎಸ್ ಕೆಂಗನಾಳ ಅವರ ಕವಿತೆ-ಬದುಕಿನ ಸತ್ಯ

ಭಾವದೊಳಗೆ ನಮ್ಮ ಬರವಣಿಗೆ
ಅಂದವಾದ ಹೂವಿನಂತೆ ಅರಳಬೇಕು
ಕಾವ್ಯದೊಳಗೆ ಈ ಬದುಕೆ ಒಂದು
ಸುಂದರವಾದ ಕಥೆಯಾಗಿ ಬೆಳೆಯಾಗಬೇಕು..!!!

ಕನಸುಗಳೇ ನಮ್ಮ ಬದುಕಿನ
ಬರವಣಿಯಾಗಿ ಮೂಡಿ ಬರಬೇಕು
ನೆನಪುಗಳೇ ಅದರಲ್ಲಿನ ಸಾಲುಗಳಾಗಿ
ಕೇಳುಗರ ಮನ ಮುಟ್ಟಬೇಕು..!!!

ಕನ್ನಡಿಯಲ್ಲಿ ಕಾಣಿಸುವ ಬಿಂಬವು
ಸದಾಕಾಲವೂ ಕಪ್ಪಾಗಿ ಇರಬೇಕು
ಮನದೊಳಗಿನ ಆಲೊಚನೆಗಳು ಮಾತ್ರ
ಇನ್ನೊಬ್ಬರಿಗೆ ಮಾದರಿಯಾಗಿ ನಿಲ್ಲಬೇಕು..!!!

ಕೆಲವರು ನಮ್ಮನ್ನು ತಿರಸ್ಕರಿಸಿದರು ಚಿಂತೆಯಿಲ್ಲ
ನಾವುಗಳು ಸರಿಯಾದ ದಾರಿಯಲ್ಲಿ ನಡೆಯಬೇಕು
ಆಸೆ ಕನಸುಗಳು ಸತ್ತರು ಅಡ್ಡಿಯಿಲ್ಲ
ಈ ಬದುಕಿನಲ್ಲಿ ಸದಾಕಾಲವೂ ನೆಮ್ಮದಿಯಿಂದ ಇರಬೇಕು..!!!

ಇದುವೇ ಬದುಕಿನ ಸತ್ಯ

—————————————————–

Leave a Reply

Back To Top