ಬಂಗಾಳಿ ಕವಿ ವಿಜಯ್ ಸಿಂಗ್ ಅವರ ಕವಿತೆ ʼನೆನಪುಗಳುʼ ಕನ್ನಡಾನುವಾದ ನೂತನ ದೋಶೆಟ್ಟಿ

nutan

ನೆನಪುಗಳು ವೇದನೆಯನ್ನು ಮಾತ್ರ ಕಲೆಹಾಕುತ್ತವೆ
ಎಕ್ಕದ ಗಿಡದ ಛಾಯೆ ಮನದ ಹಾಸಿನ ಮೇಲೆ ಆವರಿಸಿದರೂ
ಅಲ್ಲಿ ಮತ್ತೇನೂ ಬೆಳೆಯಲಾರದು
ಶುದ್ಧಿಕಾರಣಗೊಂಡರೂ
ನೀನಂತೂ ಅರ್ಥಹೀನ ಸಾರವನ್ನು ಸೋಸುತ್ತ ಕರಾಗುತ್ತಲೇ ಹೋಗುತ್ತಿ.

ನಾಲ್ದೆಸೆಗಳ ಅಕಂಪಿತ ಘೋಷಗಳ ನಡುವೆ
ದೇಹದ ತೆಳು ಹಾಳೆಯಂಥ ಬದುಕ ನಡೆಸುವ ನೀನು
ದಶಕಗಳಿಂದ ಹೀಗೇ ಜೀವಿಸುತ್ತಿರುವೆ.

ಇಲ್ಲಿಯ ಶುದ್ಧತೆ, ಬೆಳದಿಂಗಳು, ಜಲದ ಸಲಿಲ ದನಿ
ಜಯಾಪಜಯಗಳ ನೋಡಬೇಕಿದೆ ನೀನು
ನರಕದ ದಾವಾಗ್ನಿಯಿಂದ ಸುಟ್ಟ ಕೈಗಳ ಶುಶ್ರೂಷೆ ಮಾಡುವುದನ್ನೂ
ಹಾಗೂ
ಚಂದ್ರಮನೇ
ಕೊನೆಯ ನಕ್ಷತ್ರದವರೆಗೂ ಪಯಣಿಸಿ
ಬೂದಿಯಾಗುವುದನ್ನೂ
ನೀನು ನೋಡಬೇಕಿದೆ


Leave a Reply

Back To Top