ಕಾವ್ಯ ಸಂಗಾತಿ
ಬಾಗೇಪಲ್ಲಿ
ಗಜಲ್

ಬದುಕಿನ ಹಲವು ದಿನ ಉನ್ಮಾದದಿ ಕಳೆದದ್ದುಂಟು
ಹಲವುದಿನ ಹಸಿವಿನಿಂದ ಬಳಲಿ ಸೊರಗಿದ್ದುಂಟು
ಹಲವು ಬಂಧು ಮಿತ್ರರ ಸಾವನ್ನು ಪ್ರತ್ಯಕ್ಷ ಕಂಡೆ
ಪಾಪಿ ಚಿರಾಯು ಎಂಬ ಗಾದೆ ನಿಜ ಅನಿಸಿದ್ದುಂಟು
ಕೆಲ ಸಹೃದಯ ಪರಿಚಿತರ ಭೀಕರ ಅಂತ್ಯ ಕಂಡೆ
ಧಾತನಲಿ ಇದ್ದ ಚೂರು ಭರವಸೆ ತೊರೆದದ್ದುಂಟು
ಅನುಭವದಿ ಜಾತ್ರೆ ದೊಂಬಿಯಲಿ ಜೀವಿಸುವುದ ಕಲಿತೆ
ಪ್ರಾಮಾಣಿಕರ ಕಷ್ಟವ ಕಂಡು ಹತಾಶನೂ ಆದದ್ದುಂಟು
ಕೃಷ್ಣಾ! ಹೆರಿಗೆ ನೋವೆಂದು ಕೂಸು ಬೇಡವೆನ್ನಲಾದೀತೆ
ನನಗೆ ಸಾಧ್ಯದ ಹೊಸ ಹಾದಿ ಹಿಡಿದು ಕೊನೆ ಸೇರಿದ್ದುಂಟು
—————————————————————————————————-
ಬಾಗೇಪಲ್ಲಿ
