“ದೀಪದಡಿಯ ನೆರಳು”ರಮೇಶ್ ಗೋನಾಲ ಅವರ ಕವಿತೆ

ಬಾಬಾಸಾಹೇಬರ ಬಾಳಲಿ
ಬಂದಳೊಬ್ಬಳು ತಾಯಿ..
ಅವಳೇ.. ರಮಾಬಾಯಿ
ಆದಳು
ಬಾಬಾಸಾಹೇಬರಿಗೆ ಎರಡನೇ ತಾಯಿ…
ಬಂದೆಲ್ಲ ಕಷ್ಟ ನಷ್ಟಗಳ,
ನೋವು ನಲಿವುಗಳ
ಬಂಧುಗಳಂತೆ ಬರಸೆಳೆದು
ವಿಶ್ವದ ಜ್ಞಾನಜ್ಯೋತಿಯ
ಬಾಳು ಬೆಳಗಿದಳು..


ಬಾಬಾಸಾಹೇಬರ ಬರೆದ ಲೇಖನಿಗೆ
ನೆತ್ತರನೆ ಬಸಿದು
ಸಮಾನತೆಯ ಹೋರಾಟದ
ಪಯಣದಲ್ಲಿ ಜೊತೆಯಾಗಿ
ಇತಿಹಾಸದ ಪುಟಗಳಲಿ
ಎಲೆ ಮರೆಯ ಕಾಯಾಗಿ
ಉಳಿದವಳು.

ಬಾಬಾಸಾಹೇಬರ ಹೆಸರಿಗೆ
ನೀ ಉಸಿರಾದೆ ತಾಯಿ
ಜನ ಮನದಲಿ
ಅಚ್ಚ ಹಸಿರಾದೆ ದೇವಿ
ಮಹಾ ಮಾನವತಾವಾದಿಯ
ಬೋಧಿ ವೃಕ್ಷದ ನೆರಳು ನೀನಾದೆ
ದೀಪದಡಿಯ ನೆರಳಾಗೆ ಉಳಿದೆ.

Leave a Reply

Back To Top