ಕಾವ್ಯ ಸಂಗಾತಿ
ಡಾ.ಶಶಿಕಾಂತ.ಪಟ್ಟಣ ಪೂನಾಅವರ ಕವಿತೆ-
ಮಳೆ ಮತ್ತು ಅವಳು

ಸೋನೆ ಮಳೆ ತುಂತುರು ಹನಿ
ಅವಳು ಮಧುರ ಭಾವದ ಮಣಿ
ಮುಗಿಲ ಕಾಯ್ದು ಮೋಡ ಬಿಚ್ಚಿ
ನೆಲ ತಣಿಸಿ ಹಸಿಯುಣಿಸುವ ರಭಸ
ಜಡೆಯ ಬಿಚ್ಚಿ ಮುಗುಳುನಗೆ
ಒಳಗೊಳಗೆ ಅನುಭಾವದ ಬಗೆ.
ಭೂಮಿ ಆಗಸ ಒಂದು ಮಾಡಿ
ರಾತ್ರಿಯಿಡಿ ಜಡೆಯುವ ಪರಿ.
ಬಾಳು ಬಟ್ಟೆಗೆ ಉಸಿರಿಟ್ಟ ನಾರಿ
ಸುತ್ತಲಿನ ಬೇರಿಗೆ ತ್ರಷೆಯ ವಾರಿ .
ಗುಡುಗು ಸಿಡಿಲು ಮಿಂಚು ಅಬ್ಬರ .
ಮರಗಳುರುಳಿ ಸತ್ತವು ಮೇಕೆ ಹಸು
ನಂಜು ನುಂಗಿ ಮುಖವೆತ್ತಿ
ತುತ್ತು ಹಾಕಿದಳು ಹಸುಗೂಸುಗಳಿಗೆ .
ಗಾಳಿ ಚಂಡ ಮಾರುತ ಹುಯಿಲೆದ್ದವು .
ಗುಡಿಸಲು ಚಪ್ಪರ ಕಿತ್ತುಕೊಂಡು .
ಬಯಲಲಿ ಬಿದ್ದರೂ ಸೆರಗಲಿ ಸಲುಹಿದಳು
ಬಿಕ್ಕಿ ಅಳುವ ನೆನೆದ ಕಂದಮ್ಮಗಳು
ಸಿಂಪಿ ಬಾಯ್ಬಿಟ್ಟಿದೆ ಬಿರುಕು ಮನ
ಹೊಯ್ಯುತಿದೆ ಸ್ವಾತಿ ಮುತ್ತು .
ಒಳಗೊಳಗೆ ಸುನಾಮಿ ಆತಂಕ
ಜೀವ ಸವೆದಳು ತೊರೆದು ಕುತ್ತು .
ಹಳ್ಳ ಕೊಳ್ಳ ಹರಿದು ನಲಿದವು
ಸುತ್ತ ಹಸುರಿನ ಕಾಡು .
ದೈವಲೀಲೆ ಮೋಹ ಮಾಯೆ
ಅವ್ವ ಮಾತೆ ಕರುಳ ತಾಯೆ.
ಡಾ.ಶಶಿಕಾಂತ.ಪಟ್ಟಣ.ಪೂನಾ

ಅತ್ಯುತ್ತಮ ಕವನ ಸರ್
ಅವ್ವನ ಹೆಂಗರುಳ ತಾಯಿಯ ಮಮತೆಯನ್ನು ಅತ್ಯಂತ ಭಾವಪೂರ್ಣವಾಗಿ ನಿಮ್ಮ ಕವನದ ಸಾಲುಗಳಲ್ಲಿ ಜೀವಂತಿಕೆಯ ಕರುಳ ಬಳ್ಳಿಯಾಗಿ ಹೆಣೆದಿದ್ದೀರಿ ಸರ್
ಎಲ್ಲರ ಮನಕೆ ಆಪ್ತತೆಯನ್ನು ಕೊಡುವ ಕವನ…
ತಾಯಿ ಎಂದಿದ್ದರೂ ತಾಯಿಯೇ… ತಾಯಿಯ ಸ್ಥಾನ ಯಾರೂ ತುಂಬಲಿಕ್ಕೆ ಆಗುವುದಿಲ್ಲ
ಸುತೇಜ
ಅವ್ವನ ನೆನಪೇ ಸುಂದರ ಸೋನೆ ಮಳೆಯಾಗಿ
ಸುರಿದ ಸುಂದರ ಭಾವ ಗೀತೆ
ಸ್ವಾತಿ ಮುತ್ತಿನ ಮಳೆ ಹನಿಯೇ
ಮೆಲ್ಲಮೆಲ್ಲನೆ ಧರೆಗಿಳಿಯೇ
ತಾಯಿ ವಾತ್ಸಲ್ಯಮಯಿ
ಅದ್ಭುತ ಕವನ ಸರ್