ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ಗಜಲ್

ಕಸಿವಿಸಿಗೊಂಡರೂ ಉಸಿರು ಎತ್ತಲಾರೆ ರಿವಾಜುಗಳೇ
ಕಳವಳಿಸಿ ಸೋತರೂ ಸತ್ಯವನು ಬಿಡಲಾರೆ ರಿವಾಜುಗಳೇ
ಆಯುಷ್ಯದ ತಿರುಗಣಿಯಲಿ ಸಿಲುಕಿರುವೆ ಅರಿಯದೆ ಗೊತ್ತೇ
ತಡಬಡಿಸಿ ತಳಮಳಿಸಿದರೂ ಅಂಜುತ ಬದುಕಲಾರೆ ರಿವಾಜುಗಳೇ
ಉಂಡ ನೋವುಗಳು ಮಾಯದ ಗಾಯಗಳು ನೂರಾರು ಮನದಲಿವೆ
ಕಂಡ ಕಂಡವರ ಎದುರು ಕೈಗಳ ಚಾಚಲಾರೆ ರಿವಾಜುಗಳೇ
ಕಟ್ಟುಪಾಡುಗಳನು ಎಷ್ಟೇ ನನಗೆ ವಿಧಿಸಿಬಿಡಿ
ತೊಟ್ಟ ಶಪಥವನು ಸತ್ತರೂ ಮುರಿಯಲಾರೆ ರಿವಾಜುಗಳೇ
ದೇವ ಕೊಟ್ಟಿಹನು ಈ ಪರಮ ಮೌಲ್ಯದ ದೇಹವನು
ನಿಯತ್ತಿನ ಬೇಗಂ ನಾನೆಂದೂ ನಿಮ್ಮ ಮುಂದೆ ಬಾಗಲಾರೆ ರಿವಾಜುಗಳೇ
ಹಮೀದಾಬೇಗಂ ದೇಸಾಯಿ

ಸ್ವಾಭಿಮಾನದ ಮಾರ್ಮಿಕ ಗಝಲ್.