ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ಅಂತ್ಯ ಎಂದು…?

ಎದೆಯುಬ್ಬಿಸಿ ನಡೆದಿದ್ದಾರೆ
ತಗ್ಗಿ ಬಗ್ಗಿ ನಡೆಯಬೇಕೆನ್ನುವವರೇ..
ಗೆಳೆತನದ ಸೋಗಿನಲಿ ಕತ್ತಿ ಮಸೆಯಲು
ಕಳ್ಳ ಹುನ್ನಾರ ಹೂಡಿದ್ದಾರೆ…
ಒಳ ಸಂಚು ನಡೆಸಿದ್ದಾರೆ
ದ್ವೇಷದ ಸಾಧಿಸಲು ನಗುವಿನ ಮರೆಯಲಿ..
ಆಸರೆಯ ಸೂರಿನಲಿ ಭರವಸೆಯ
ಗೋಡೆಗೆ ಕನ್ನ ಕೊರೆದಿದ್ದಾರೆ..
ಶಬ್ದ ಜಾಲದಲಿ ಮೋಡಿಮಾಡಿ
ಮೋಸದ ಬಲೆಯನೇ ಬೀಸಿದ್ದಾರೆ..
ಹನಿ ವಿಷವ ಬೆರೆಸಿದ್ದಾರೆ
ಪ್ರೀತಿಯ ಜೇನಿಗೆ ಗೊತ್ತಾಗದಂತೆ..
ಕುಹಕ ನೋಟ ಬೀರಿದ್ದಾರೆ
ಮುಗ್ಧತೆಯ ಮುಖವಾಡ ಧರಿಸಿ..
ವಂಚನೆಯ ಬಣ್ಣ ಬಳಿದಿದ್ದಾರೆ
ಮಿಥ್ಯದ ತೆರೆಗೆ ಸ್ವಾರ್ಥ ಸಾಧನೆಗೆ…
ಭಯದ ಬೀಜ ಬಿತ್ತಿದ್ದಾರೆ
ಅನುಕಂಪದ ಭಾವ ತೋರುತ..
ಕರುಣೆಯ ಕೋಡಿ ಹರಿಸಿ
ಕ್ರೌರ್ಯದ ನಡೆ ತೋರಿದ್ದಾರೆ..
ಇದೆಂಥ ಅನ್ಯಾಯದ ವರ್ತನೆ ಖುದಾ..
ಇದಕೆಲ್ಲ ಅಂತ್ಯ ಎಂದು…?
ಹಮೀದಾಬೇಗಂ ದೇಸಾಯಿ.

ಮಾರ್ಮಿಕವಾಗಿ ಮೂಡಿಬಂದಿದೆ.
ಸ್ಪಂದನೆಗೆ ಧನ್ಯವಾದ ತಮಗೆ
ಹಮೀದಾಬೇಗಂ.