ವಾಣಿ ಭಟ್ ವಾಪಿ ಗುಜರಾತ ಅವರ ಕವಿತೆ-ʼನಿಮ್ಮ ಕವನವೆʼ

ನಿಮ್ಮ ಕವನವೆ
ಅನುವಾದಿತ ನಾದ,
ಹೃದಯ ತುಂಬಿತು
ಮಧುರ ಸ್ವಾದ!
ಪ್ರತಿ ಸಾಲು
ಸಿಹಿ ನೆನಪು
ಮನದಾಳದಲ್ಲಿ
ಅದು ಮೂಡಿ ಬಂತು!
ಎಲ್ಲಕ್ಕಿಂತ ಮಧುರ,
ಇಂಪಾದ ಹಾಡು,
ನನ್ನ ಮನಸಿನ
ಗಂಭೀರ ನುಡಿ ಕಾದು!
ಕವನ ಕಾವ್ಯಕೆ
ನಮನಗಳ ಸಾಲು,
ಇನ್ನೂ ಚಿಗುರಲಿ
ಕವನಗಳ ಕವಲು!
ಬೆಳೆದ ಹೆಮ್ಮರದ ಕೆಳಗೆ
ತಂಗುವ ನಾನು ನೀನು


8 thoughts on “ವಾಣಿ ಭಟ್ ವಾಪಿ ಗುಜರಾತ ಅವರ ಕವಿತೆ-ʼನಿಮ್ಮ ಕವನವೆʼ

  1. ಬೆಳೆದ ಹೆಮ್ಮರದ ಕೆಳಗೆ
    ತಂಗುವ ನಾನು ನೀನು

    ಎಷ್ಟು ಮಧುರ ಭಾವ

    ಸುತೇಜ

Leave a Reply

Back To Top