ಡಾ.ಸಿದ್ಧರಾಮ ಹೊನ್ಕಲ್ ಅವರ ತಾಂಕಾಗಳು

1)

ಬಿತ್ತಿಕೋ ಒಮ್ಮೆ
ನಿನ್ನೊಳಗೆ ನನ್ಞನು
ಪ್ರಿಯ ಸಖಿಯೇ
ನಿನ್ನಂಥದೇ ಚೆಂದನೆ
ಹೆಣ್ಣು ಮಗುವಾಗುವೆ

2)

ಹೂ..ಅರಳೋದು
ಬಾಡೋದು ಸಹಜವು
ನನ್ನೊಲವ ಹೂ..
ಅನ್ಯರ ಮನದಲ್ಲಿ
ಅರಳದಿರಲೆಂಬೆ

3)

ನಿನ್ನ ಸಂಗದಿ
ನಾ ಮೈಮನ ಮರೆತು
ಹುಚ್ಚಾಗಿಹೆನು
ಪ್ಲೀಜ್ ಮತ್ತ್ಯಾರಿಗೂ ನೀ
ಈ ಮತ್ತೇರಿಸಬೇಡ


One thought on “ಡಾ.ಸಿದ್ಧರಾಮ ಹೊನ್ಕಲ್ ಅವರ ತಾಂಕಾಗಳು

  1. ತುಂಬಾ ಚೆನ್ನಾಗಿವೆ. ಹತ್ತಾದರೂ ಇರಲಿ. ಮೂರಕ್ಕೆ ಹೊಟ್ಟೆ ತುಂಬಲ್ಲ.

Leave a Reply

Back To Top