ಇಮಾಮ್ ಮದ್ಗಾರ್ ಅವರ ಕವಿತೆ-ಹೇಳು

ಜಟಿಲಭಾವ ಕುಟಿಲತೆಗೆ ಸಿಲುಕಿ ಇಶಾಚರ ನಿಶಾಚರರ ಮಧ್ಯೆ ನಗುವನ್ನೇ ಮರೆತ ಮೌನ !
ಹೇಗೆ ಬದುಕಲಿ ಹೇಳು

ಕಲ್ಲು ಮುಳ್ಳುಗಳ ಹಾದಿ ಸವೆಸಿ ಮೆಲ್ಲಮೆಲ್ಲನೆ ಭಾವನೆಗಳ ಭಾವದಿ ಬದುಕಿ ಜೊತೆಗೂಡಿ ಚಿತೆಯೇರುವ ಕನಸು ಕಂಡವಳು ನಾನು ನೀನಿಲ್ಲದೇ ಹೇಗೆ ಬದುಕಲಿ ಹೇಳು

ಅನುಮಾನದ ಹುತ್ತದಲಿ
ಸತ್ತ ನಂಬಿಕೆಯ ಉರಗ
ಕಣ್ಣಿಗೆ ಕಾಮಾಲೆ ಜಗವೇಲ್ಲ
ಹಳದಿ
ನಿದ್ದೆಇರದ ರಾತ್ರಿಗಳಲಿ
ಅಪನಂಬಿಕೆಯ ಛಾಯೆ
ಹೇಗೆ ಬದುಕಲಿ ಹೇಳು

ಕನಸುಗಳ ಊರು ಬಾಗಿಲು ತೆರೆಯುತ್ತಿಲ್ಲ ಹೇಗೆ ಎರಲಿ ನಾನು ಮನಸಿನ ತೇರು
ಬರಿದಾದ ಭಾವ ಮುರಿಯುತಿದೆ ಮಾತು
ಕನಸೊಂದೂ ನನಸಾಗುತ್ತಿಲ್ಲ ನಿನ್ನ ಕನಸಿನ ಊರಿಗೆ ನಾನೇ ಕಾಲ್ತೊಡಕು ಹೇಗೆ ಬದುಕಲಿ ಹೇಳು


Leave a Reply

Back To Top