ಕಾವ್ಯ ಸಂಗಾತಿ
ಲಲಿತಾ ಕ್ಯಾಸನ್ನವರ
ಜನ್ಮದ ಮೈತ್ರಿ
ತೊರೆದು ಜೀವಿಸಬಹುದೇ ಇನಿಯ
ನಿನ್ನ ನೆನಪನ್ನು
ಕತ್ತಲಲಿ ಕೈ ಹಿಡಿದು ಎತ್ತಿದೇನೆ
ಈ ಜೀವನವನು ನೀಡಿದ
ಭಾವನೆಗಳಿಗೆ ದಿನದ ಬೆಳಕನ್ನು
ನನ್ನ ಜೀವನ ನಿನ್ನ ಜೊತೆಗಿನ್ನು
ಬಂಧನವ ಬಿಗಿದಿರುವೆ
ಜನ್ಮ ಜನ್ಮಾಂತರಕಿನ್ನು ಬಿಡದೆ ನಿಮಗಿನ್ನು
ಏಳಿರಲಿ ಬೀಳಿರಲಿ
ಕಾಡುವ ನೋವಿರಲಿ ಎಂದೂ ಹಠ ಮಾಡೆ
ಹೃದಯದರಸನೆ ಇನ್ನು
ಕನಸುಗಳ ಹೆಣೆ ಹೆಣೆದು ಕಾಮನಬಿಲ್ಲಿನ
ರಂಗುತುಂಬಿ ತುಳುಕುತಿರಲು
ಸಾಕೆಂಬೆ ಈ ಜನುಮದಲಿ
ನಸುಗಳ ಹೆಣೆ ಹೆಣೆದು ಕಾಮನ ಬಿಲ್ಲಿನ ಬಣ್ಣವನದು ತುಂಬಿ
ಒಲವಿನ ಹೂಬಳ್ಳಿ ಅರಳುತಿರಲು
ಸಾಕೆಂಬೆ ಈಜನುಮದಲಿ
ಲಲಿತಾ ಕ್ಯಾಸನ್ನವರ