ಮಕ್ಕಳ ಸಂಗಾತಿ
ಸುಲೋಚನ ಮಾಲಿಪಾಟೀಲ್
ತುಂಟಾಟದ ಆಟ
ಶಾಲೆಯ ಬೆಸಿಗೆಯ ರಜ
ಹೊರಟೆವು ಮಾಡಲು ಮಜ
ಅಜ್ಜನಿಗೆ ಕುರಿ ಮರಿ ನಾವೆಲ್ಲ
ನಾನೇ ಅಜ್ಜಿಯ ಮುದ್ದು ರಾಜ
ಗೊಡೆಯ ತುಂಬ ಗಿಚಿದ ಚಿತ್ತಾರ
ಬೆಕ್ಕು ನಾಯಿ ಗುಬ್ಬಚ್ಚಿಗಳ ಆಕಾರ
ವರ್ಣಕ್ಷರದ ಗೋಲು ಗೋಲಾಕರಕೆ
ಅಮ್ಮ ಮಾಡಿದ್ದಾಯ್ತು ಬೆತ್ತದಿ ಸತ್ಕಾರ
ಮಳೆ ಬಂದಾಗ ಅಪ್ಪಿಕೊಂಡು ಕುಣಿದಾಟ
ಆಣೆ ಕಲ್ಲು ಆರಿಸಿ ಗಬಕ್ ನುಂಗೊ ಚಟ
ಮೈ ಒದ್ದೆಯಾಗಿ ಜಾರಿ ಜಾರಿ ಬೀಳೊ ನೋಟ
ಒಬ್ಬರಿಗೊಬ್ಬರ ಜಗ್ಗಾಟದಲಿ ರಂಪಾಟ
ಕೃಷ್ಣನಂತೆ ಕಿಟಲೆ ಮಾಡುವ ತುಂಟ
ಮನೆತುಂಬ ಕಸಕಡ್ಡಿ ಹಾಕುವ ಹಟ
ಅಮ್ಮನ ಕಾಡಿಸಿ ಗೊಳಾಡಿಸುವ ಪುಟ್ಟ
ಕೊರಳಲ್ಲಿ ಕೈಹಾಕಿ ನಗಿಸುವ ಬಾಲನಟ
ಹೊಸ ಹೊಸ ತಿಂಡಿಗಳ ಸವಿಯುತ
ಅಮ್ಮನಿಗೆ ಮುದ್ದುಕೊಡುವ ಲಟಲಟ
ವಿದ್ಯಾಭ್ಯಾಸದಲಿ ಮುಂಚುಣಿ ಪರಿಪಾಠ
ಎಲ್ಲರ ಕಾಲೆಳೆಯುವ ಕಿಟಲೇ ಕಿಟ್ಟ
ಸುಲೋಚನ ಮಾಲಿಪಾಟೀಲ್
ಬಹಳಷ್ಟು ಕಾಗುಣಿತ ತಪ್ಪಾಗಿವೆ. ಅವನ್ನು ಸರಿಪಡಿಸಿಕೊಳ್ಳಿ.