ಕಾವ್ಯ ಸಂಗಾತಿ
ಮನ್ಸೂರ್ ಮೂಲ್ಕಿ
ಅವಿತಿಹ ಕವಿತೆ
ಅವಿತಿಹ ಕವಿತೆಯು ಮೂಡಿದೆ ಇಂದು ನಿನ್ನಾಸೆಯ ನೋಟದಲಿ
ಹೇಳಿದೆ ಮನವು ಇರುವೆನು ಎಂದೂ ಹೃದಯದ ಸನಿಹದಲಿ
ಅರಳಿದ ಹೂವು ನಿನ್ನನೇ ನೋಡುತ ನಗುವನು ಬೀರುತಿದೆ
ನೆನಪುಗಳೆಲ್ಲವೂ ನನ್ನನ್ನೇ ಕಾಡುವ ಪ್ರೀತಿಯ ಬೇಡುತಿದೆ
ಸನಿಹದ ನಡೆಯಲಿ ಚುಮ್ಮಿದ ನುಡಿಗಳು ಕಥೆಯನು ಹೇಳುತಿದೆ
ಸಂಜೆಯ ಸೂರ್ಯನ ಬಣ್ಣದ ಕಿರಣವು ಕಡಲನೇ ಕುಣಿಸುತಿದೆ
ನೀಲಿಯ ಬಾನಲ್ಲಿ ಹಕ್ಕಿಯ ಕಲರವ ಮನಸನು ತಣಿಸುತಿದೆ
ತಂಪಾದ ತಂಗಾಳಿ ನಮ್ಮಲ್ಲಿ ಸುಳಿಯಲು ತೋಳಿಗೆ ತೋಳು ತಾಗುತ್ತಿದೆ
ಮನ್ಸೂರ್ ಮೂಲ್ಕಿ