ಮುಂಗಾರು ಮಳೆ
ಮುಂಗಾರಿನ ಆಗಮನ
ನಮ್ಮೆಲ್ಲರಲ್ಲಿ ನವಚೈತನ್ಯ
ಬಿಸಿಲ ಝಳಕ್ಕೆ ಕಂಗಾಲಾಗಿರುವಾಗ
ನೀ ಬಂದು ನೀಡುತ್ತಿ ಸಂತಸ!
ರಜೆಯ ಮಜದಿಂದ
ಚಿಣ್ಣರು ಶಾಲೆಯತ್ತ
ಬೆಳೆಗಳನ್ನು ಫಲವತ್ತಾಗಿಸಲು
ರೈತರು ಗದ್ದೆಯತ್ತ!
ಮಾಸಗಳಲ್ಲಿ ಶುರುವಾಗುವ
ಒಂದೊಂದು ಚಟುವಟಿಕೆಗಳು
ಚಟುವಟಿಕೆಗಳಿಂದ ಹಚ್ಚ ಹಸಿರಾಗುವ ಪ್ರಕೃತಿ
ಪ್ರಕೃತಿಯ ಮಡಿಲಲ್ಲಿ ತೃಪ್ತಿಯಿಂದ ಬೀಗುವ ನಾವುಗಳು
ನಾವುಗಳು ಇತ್ತೀಚೆಗೆ ತೋರುವ ಸ್ವಾರ್ಥತೆ
ಸ್ವಾರ್ಥತೆಯಿಂದ ನಿಸರ್ಗದ ಮೇಲಿನ ಹಾನಿ
ಮನುಜರು ಮಾಡುತಿಹರು ಪಾಪ
ನೀ ಕೊಂಚ ತಡವಾದರೂ ಹಾಕುವೆವು ಶಾಪ!
ಹೇ ಮುಂಗಾರು ಅದು ನಿನಗಲ್ಲ
ಮಾನವನ ದುರಾಸೆಗೆ ಮಿತಿಯಿಲ್ಲ
ಹೇಗೆ ಕೇಳಲಿ ನಿನ್ನ
ಕ್ಷಮಿಸುವೆಯಾ ನಮ್ಮನ್ನೆಲ್ಲ!
ಹಾನಿಯ ತೀವ್ರತೆಗೆ ಮುಂದೂಡಲ್ಪಟ್ಟಿರುವ ಮುಂಗಾರು ಮಳೆ
ಮುಂಗಾರು ಮಳೆಗಾಗಿ ನಡೆಯುವ ವಿನಂತಿ
ವಿನಂತಿ ಏನೆಂದರೆ ಬೇಡ ಭೂಮಾತೆಯ ನಾಶ
ನಾಶ ಮಾಡಿ ಹೋಗುವೆವು ಕಣ್ಣೆದುರೇ ನಶಿಸಿ..!!
********
ಸುಪ್ರೀತಾ ವೆಂಕಟ್