ಪೂಜ್ಯರಾದ ಶಾಂತರಸ ರ ಒಂದು ಗಜಲ್‌ಗೆ ತರಹಿ ಪ್ರಯತ್ನ(ಊಲಾ-ಎ ಮಿಶ್ರಾ ತರಹಿ) ಯ.ಮಾ.ಯಾಕೊಳ್ಳಿ

ಪೂಜ್ಯರಾದ ಶಾಂತರಸ ರ ಒಂದು ಗಜಲ್‌ಗೆ ತರಹಿ ಪ್ರಯತ್ನ
(ಊಲಾ-ಎ ಮಿಶ್ರಾ ತರಹಿ)

ಅರುವತ್ತು ತುಂಬಿದರೂ ಮಧುವುಂಟು ಪ್ರಿಯಳೇ ಮಾಧರ‍್ಯವುಂಟು
ಹದಿನಾರರಲಿ ನಿನ್ನಕಂಡು ಬೆರಗಾಗಿದ್ದೆ ಇನಿಯಳೇ ತೇಜವುಂಟು

ಒAದಿನಿತು ಕಾಂತಿಯನು ಕಳೆದುಕೊಳ್ಳದ ನವನವೋನ್ಮೇಶಶಾಲಿನಿ
ವರುಷ ವರುಷಕೆ ಇನ್ನೂ ಹೊಳೆ ಹೊಳೆವ ಹೊಸ ಕಳೆ ಕಾಂತಿಯುAಟು
ಪ್ರತಿ ಸಲವೂ ಸುರಿವ ಮಳೆಗಾಲ ತನ್ನ ರಭಸವ ಮರೆಯಲಾರದು
ನಿನ್ನ ದೇಹದ ಕಾಂತಿಗೆ ಪ್ರತಿ ವಸಂತಕೆ ಪುನರ್ಭವಿಸುವ ಶಕ್ತಿಯುಂಟು

ಅರಳಿ ನಿಂತು ದುಂಬಿಗಾಹ್ವಾನವೀವ ಗಿಡವೂ ನಿನ್ನ ಸಮನಿಸದು ಗಂಧದಲಿ
ಹತ್ತಿgಕೆ ಬರೆ ರೋಮಾಂಚನಗೊಳಿಪ ಮೋಹಕತೆ ತುಂಬಿರುವದುAಟು

ಜೋಗಿಯ ಎದೆಯರಮನೆಯಲಿ ರಾಜತೇಜದಲಿ ಸದಾ ಮೆರೆವವಳೇ
ಒಲವೆಂಬ ಅಮೃತವ ಕುಡಿಸಿ ನನ್ನ ಬಾಳನು ಕಾಯ್ವ ಬಲ ನಿನ್ನೊಳುಂಟು


Leave a Reply

Back To Top