ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಬೆಳಕಾದಳು
ಕೆನೆ ಮೊಸರು ಕಲಿಸಿದಳು
ಹುಳಿ ಬಾನ ಉಣಿಸಿದಳು
ಮುಗಿಲಿಗೆ ಚಪ್ಪರ ಹಾಕಿದಳು
ನನ್ನೊಡತಿ
ಜಗಕೆಲ್ಲ ರಂಗೋಲಿ ಬಿಡಿಸಿದಳು
ಗಿಲಗಂಚಿ ಕಣ್ಣವಳು
ಗುಳಿ ಗಲ್ಲ ನಗೆಯವಳು
ನಾಗರ ಹೆಡೆ ಜಡೆಯವಳು
ನನ್ನೊಡತಿ
ಪ್ರೀತಿಯ ಒಡವೆ ತೊಟ್ಟವಳು
ನಡೆ ಹಂಸ ಹೆಜ್ಜೆ
ಧ್ವನಿ ಮಧುರ ಕೋಗಿಲೆ
ನವಿಲು ನಾಚುವ ನೃತ್ಯ
ನನ್ನೊಡತಿ
ಬಳಕುವ ಬಕುಳು ಸಿರಿ ವನವು
ಹಗಲಿರುಳು ಒಲವಿಗೆ
ತೆತ್ತಳು ತನ್ನುಸಿರು
ಬದುಕಾದಳು ನನ್ನ ಜೀವಕ್ಕೆ
ನನ್ನೊಡತಿ
ಬೆಳಕಾದಳು ನನ್ನ ಗೂಡಿಗೆ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
Very Beautiful poem Sir
ಬೆಳಕಾದಳು ನನ್ನ ಗೂಡಿಗೆ…
ಒಂದಕ್ಕಿಂತ ಒಂದು ಸೊಗಸಾದ ಸಾಲುಗಳು
ಸುತೇಜ
ರಮ್ಯಗೀತೆ ಸೊಗಸಾಗಿದೆ ಸರ್
ರಮ್ಯ ಗೀತೆ ಸೊಗಸಾಗಿದೆ ಸರ್