ಕಾವ್ಯ ಪ್ರಸಾದ್ ಅವರ ಕವಿತೆ-ಈ ಬಾಳಿನ ಪಯಣವು

ಈ ಬಾಳಿನ ಪಯಣವು ಬಹು ದೂರವಿದೆ ಸಾಗಿಸಬೇಕಲ್ಲ
ಕಳ್ಳು ಮುಳ್ಳಿನ ದಾರಿಯಲ್ಲಿ ಹೂವಿನ ಹಾಸಿಗೆ ಸಿಕ್ಕಲ್ಲ!
ಸಿಗದಿರುವ ಊರಿಗೆ ನಾವು ಹೋಗಲು ಬಯಸುವುದಿಲ್ಲ
ತನ್ನ ಊರನು ಬಿಟ್ಟು ಎಲ್ಲೋ ಬದುಕುತ್ತೇವೆ ನಾವೆಲ್ಲ!!

ಇರುವವರ ಜೊತೆ ಖುಷಿಯಾಗಿ ಬದುಕು ಸಾಗಿಸಬೇಕಲ್ಲ
ಸಮಯ, ಜೀವವು ಯಾರಿಗೂ ಯಾವುದು ಶಾಶ್ವತವಿಲ್ಲ!
ಇರುವ ಕೆಲ ದಿನಗಳು ಎಲ್ಲರ ಜೊತೆ ಕೂಡಿ ಬಾಳಬೇಕು
ಬಾಳು ಎನ್ನುವುದು ನಮಗೆ ಮೂರು ದಿನದ ಬದುಕು!!

ಅಪಮಾನಗಳು ಮನುಷ್ಯನಿಗೆ ಬಂದು ಹೋಗುತ್ತದೆಯಲ್ಲ
ಪ್ರಾಣಿ ಪಕ್ಷಿಗಳು ಗಿಡ ಮರಕ್ಕು ಯಾವುದಕ್ಕು ತಪ್ಪಿಲ್ಲ!
ಕೆಟ್ಟ ಘಳಿಗೆಗಳ ಮರೆತು ಎಲ್ಲರು ಕೂಡಿ ಬಾಳಬೇಕಲ್ಲ
ನಮ್ಮವರೇ ಎಲ್ಲರು ಎಲ್ಲವನ್ನು ನಾವೇ ಸಹಿಸಬೇಕಲ್ಲ!!


5 thoughts on “ಕಾವ್ಯ ಪ್ರಸಾದ್ ಅವರ ಕವಿತೆ-ಈ ಬಾಳಿನ ಪಯಣವು

Leave a Reply

Back To Top