ಕಾವ್ಯ ಸಂಗಾತಿ
ವಿಶ್ವನಾಥ ಕುಲಾಲ್ ಮಿತ್ತೂರು-
ಭಾವ ಬೆರಗು!

ಮಿಂದು ಮಡಿಯುಟ್ಟು ಅಡುಗೆಯಲಿ ತೊಡಗಿರುವ
ತಾಯಿಯ ಮೊಗವೀಗ ಹೂವಿನರಳು!
ಪುಟ್ಟ ಮಗು ತಾನು ಬೊಚ್ಚು ಬಾಯಿಯ ತೆರೆದು
‘ಅರೆದು ಕೊಡುವೆನು ನಾನು’ ಎನುತ ನಗಲು!!
ದಿನವಿಡೀ ದುಡಿ ದುಡಿದು ಸೋತ ಜೀವಕ್ಕೆ
ಅಮೃತ ಸಿಂಚನವದುವೆ ಮಗುವಿನಾಟ!
ಆಯಾಸ ನೋವುಗಳ ಕಳೆದು ಹಗುರಾಗಿಸಿ
ಉಲ್ಲಾಸವೀಯುವುದು ಬಾಲೆಯೊಡನಾಟ!!
ಹಿರಿತನದ ಒಳಗಿಂದ ಮಗುತನವ ಹೊರಗೆಳೆದು
ಬೆಳಗಿಸುವುದು ಬಾಲೆ ಮುಗ್ಧ ಭಾವದಲ್ಲಿ!
ಕಪಟ, ಕಲ್ಮಶ ರಹಿತ ಹೂವಿನೆಸಳಿನ ಹಾಗೆ
ಎಳೆಯ ಜೀವ ಭಾವಗಳು ಲೋಕದಲ್ಲಿ!!
ವಿಶ್ವನಾಥ ಕುಲಾಲ್ ಮಿತ್ತೂರು

ತುಂಬಾ ಸೊಗಸಾಗಿದೆ..ದೇವರು ನಿಮಗೆ ಇನ್ನಷ್ಟು ಬರೆಯುವ ಶಕ್ತಿ ಕೊಡಲಿ.
ತುಂಬಾ ಇಷ್ಟ ಆಯಿತು ಸರ್
ಚೆನ್ನಾಗಿದೆ