ಕಾಡಜ್ಜಿ ಮಂಜುನಾಥ ಅವರ ಕವಿತೆ-ತೊಳಲಾಟ……!!!

ಸರ್ಕಾರಿ ಶಾಲೆಯಲ್ಲಿ
ಮುಖ್ಯಗುರುಗಳ
ತೊಳಲಾಟ;
ಬಿಸಿಯೂಟದ
ನಿರ್ವಹಣೆಗೆ ನಿರಂತರ
ಹೋರಾಟ;
ಎಸ್ಡಿಎಂಸಿ ಪೋಷಕರ
ಕೆಂಗಣ್ಣಿನ
ಇಣುಕುನೋಟ;
ಸುಧಾರಿಸಿಕೊಂಡು ಹೋಗುವುದೇ
ನಿತ್ಯದ ಪರಿಪಾಟ;
ಶಿಕ್ಷಕರ ಮನದಲಿ
ಮುಖ್ಯಗುರುಗಳು
ಪಾಠ ಮಾಡಲ್ಲವೆಂಬ
ಕಿರುಚಾಟ;
ಅವರಿಗೇನು ಗೊತ್ತು
ಎಲ್ಲರ ಸವಾರಿಕೊಂಡು
ಹೋಗುವ ಕಡುಕಷ್ಟ;
ಪಠ್ಯ ವಸ್ತು ಬೋಧನೆ
ಮುಗಿಸುವ ಒತ್ತಡದ
ಕಾರ್ಯದಾಟ;
ರೂಮ್ ಟು ರೀಡ್,ಯು ಡೈಸ್, FLN
ಅಪಾರ್, ಮರುಸಿಂಚನ
Sats,ಪರಿಪಾಲಿಸುವ
ಜಂಜಾಟ;
ಸಂಭ್ರಮಿಸುವ
ಶನಿವಾರದಿ ಉತ್ಸಾಹವಿಲ್ಲದ
ಕುಡಿನೋಟ;
ಜೊತೆಗೆ
ನೂರು ದಿನದ ಓದುವ
ಅಭಿಯಾನದ
ಮನ್ನೋಟ;
ಮಕ್ಕಳಿಗೆ ಆಟದ
ಸಮಯವಿಲ್ಲದಾಗಿರುವುದು
ದಿಟ;
ಆನ್ ಲೈನ್ ಕೆಲಸಗಳಿಗೆ
ಮಾತ್ರ ನೆಟ್ ವರ್ಕ್ ನಾ
ಕಣ್ಣಾಮುಚ್ಚಾಲೆ
ಜೂಜಾಟ;
ಅಧಿಕಾರಿಗಳ ಭೇಟಿ
ಮಾತ್ರ
ಗುಣಮಟ್ಟದ ಮಾರ್ಗದರ್ಶನದ
ಕಣ್ಣೋಟ;
ಮುಖ್ಯಗುರುಗಳ
ನೋವುಗಳಿಗೆ
ಪ್ರತಿಸ್ಪಂದಿಸುತ್ತಿಲ್ಲ
ಅಧಿಕಾರಿ ವರ್ಗ,ಸಂಘದ
ಮುಂದಾಳುಗಳ
ನಿರ್ಲಕ್ಷದ ಕುಡಿನೋಟ;
ಆದರೂ
ಶಾಲೆಯಲ್ಲಿ
ನಿರಂತರ
ನಡೆಯುತ್ತಿದೆ
ಮಕ್ಕಳಿಗೆ
ಅನ್ನ ,ಜ್ಞಾನವ ಬಡಿಸುವ
ಪರಿಪಾಟ;
ಮುಖ್ಯಗುರುಗಳ
ಸಂಕಟಗಳು ಮಾತ್ರ
ಮರೀಚಿಕೆಯಂತೆ
ಕಂಡು ಕಾಣದಂತ
ಬೆಳಕಿನಾಟ…..!!!!!


Leave a Reply

Back To Top