ಕಥಾ ಸಂಗಾತಿ
‘ಪಂಜರದಿ ಹಾರಿದ ಗಿಳಿ’
ಡಾ.ಯಲ್ಲಮ್ಮ ಕೆ
ಅವರ ಸಣ್ಣ ಕಥೆ
ಎಲ್ಲೆಡೆ ಮಳೆ ಸುಳಿಗಾಳಿ ಅದೇನೋ ಅಂತಾರಲ್ಲ ಹಾಗೆ ಏನ್ ಕಾಲ ಇದು ಸರಿಯಾಗಿ ಮಳೆ ಪ್ರಾರಂಬವಾಗದೆ ಮನಸ್ಯಾರನ ಜಡ್ಡಿಗೆ ಬೀಳಿಸ್ತೈತಿ ಈ ಆಷಾಡಮಾಸದ ಗಾಳಿ ಎಂದು ಮನೇಲಿ ಹಿರಿಯರು ಶಾಲೆಗೆ ಹೋಗುವ ಮಕ್ಕಳಿಗೆ ಕಿವ್ಯಾಗ ಹತ್ತಿ ಇಟ್ಟಕೊ, ಮೈತುಂಬಾ ಬಟ್ಟೆ ಉಟ್ಕಕೊಂಡು ಹೋಗ್ರೀ ಅಂತ ನಮ್ಮವ್ವ ಹೇಳ್ತಿದ್ಲು .
ಈ ನಮ್ಮವ್ವ ದಾಳಿ ನೋಡು ಬರಿ ಬೈಯ್ಯೋದೆ ಆಯ್ತು
ಅಂತ ಮಗಳು ಅಂಜಲಿ ಸಿಟ್ಟಿನಿಂದ ಆಯ್ತು ಬುಡು ಇಟ್ಗಂಡು ಹೋಗ್ತೀನಿ ಅಂತ ಕಿರಿಚಿದಳು.
ಅಂಜಲಿಗೆ ಐದು ಜನ ತಂಗಿಯರು ಇಬ್ಬರು ತಮ್ಮಂದಿರು ತುಂಬಿದ ಕುಟುಂಬ ಸ್ಥಿತಿವಂತ ಮನೆತನ ಎಲ್ಲಾ ರೀತಿಯ ಬೇಡಿಕೆಗಳನ್ನು ಈಡೇರಿಸಲು ಸಾಮರ್ಥ್ಯ ಹೊಂದಿರುವ ಅಪ್ಪ. ರೈತನಾದರೂ ಒಂದಿಷ್ಟು ತಿಳಿವಳಿಕೆ ವಿದ್ಯಾಭ್ಯಾಸ ಮುಗಿಸಿದ ಹತ್ತನೇ ತರಗತಿ ಮುಗಿಸಿದ್ದ ಆದರೂ ಆಧುನಿಕ ಬದುಕಿಗೆ ತಕ್ಕಂತೆ ಮಕ್ಕಳನ್ನು ಬೆಳೆಸುವ ಹಂಬಲ
ಆದ್ರೆ ತಿಮ್ಮಪ್ಪನಿಗೆ ಹೆಣ್ಣು ಮಕ್ಕಳು ಮದುವೆ ಮಾಡೋದು ಒಂದು ಸವಾಲೇ ಆಗಿತ್ತು. ಹಿಂದೆ ಅಕ್ಕಂದಿರ ಮದುವೆ ಮಾಡಿ ನಂತರ ತಾನು ಮದುವೆ ಆಗೋದ್ರಲಿ ಅರ್ಥ ವಯಸ್ಸು ಆಗಿತ್ತು.ಸರಿಯಾದ ಸಮಯಕ್ಕೆ ಮದುವೆ ಆಗಿದ್ರೆ ಈಗ 35 ವರ್ಷ ದ ಮಗನಿರುತ್ತಿದ್ದ ಬದುಕಿನ ಬಂಡಿಗೆ ಹೆಗಲು ಕೊಡೂದಕ್ಕೆ.ಆದರೆ ಈಗ ವಯಸ್ಸು 52 ದುಡಿಯುವ ಕೈಗಳು ಸೋಲುತ್ತಿವೆ ಆದರೂ ಮನೆಯ ದೊಡ್ಡ ಮಗಳು ಈಗ 18 ವರ್ಷ. ಇನ್ನುಳಿದವು 9,6,5,4 ಹೀಗೆ ಕ್ರಮವಾಗಿ ಶಾಲೆಗೆ ಹೋಗುತ್ತಿವೆ. ಹೇಗೋ ಸುಖವಾಗಿ ಸಂಸಾರ ನಡೆಸುತ್ತಾ ಮಕ್ಕಳೊಂದಿಗೆ ಜೀವನ.
ತಿಮ್ಮಪ್ಪನ ಮಗಳು ಅಂಜಲಿ ಈಗ ಬಿ.ಎ. ಅಂತಿಮ ವರ್ಷದಲ್ಲಿ ಓದುತ್ತಾ ಜಾಣೆಯಾಗಿ ಮನೆಯ ಮುದ್ದಿನ ಮಗಳಾಗಿ ಸುಖದಿಂದ ಬೆಳೆದಳು . ತಿಮ್ಮಪ್ಪನ ಸಂಕಟ ನೋವು ಆದಾಗ ಮಕ್ಕಳು ತಪ್ಪು ಮಾಡಿದಾಗ ಹೆಣ್ಣುಮಕ್ಕಳಿಗೆ ಬೈಯೋದು ಜಾಸ್ತಿ ಯಾಕೆಂದರೆ ,’ಹೆಣ್ಣು ಹುಣ್ಣು’ ಜನರು ಬಾಯಿಗೆ ಬಿದ್ದರೆ ಸಾಕು ಮನೆತನ ಮಾನ ಮರ್ಯಾದೆ ಅಂತ ಮಕ್ಕಳನ್ನು ಹೊರಗಡೆ ಸ್ನೇಹಿತರೊಂದಿಗೆ ಕಳುಹಿಸುತ್ತಿರಲಿಲ್ಲ. ಎಲ್ಲದಕ್ಕೂ ನಿರ್ಬಂಧ, ಮೊಬೈಲ್ ಬಳಸಲು ಕೊಟ್ಟಿದ್ದು ಆದರೆ ಅದು ಸಹ ನಿರ್ಬಂಧ.ಆದರೂ ಅಂಜಲಿ ರೀಲ್ಸ, ಫೋಟೋ ಗಳನ್ನು ವಾಟ್ಸಪ್ , ಫೇಸ್ಬುಕ್ ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಯಾವಾಗಲೂ ಕ್ರಿಯೇಟಿವ್ ಆಗಿರುತ್ತಿದ್ದಳು. ತನ್ನ ತಂದೆ ಬಂದಾಗ ಮಾತ್ರ ಅಡುಗೆ ವೀಡಿಯೋ , ತರಗತಿಗೆ ಸಂಬಂಧಿಸಿದ ವಿಷಯಗಳನ್ನು ನೋಡುವುದು. ಆದರೆ ತಿಮ್ಮಪ್ಪ ಸದಾ ಮೊಬೈಲ್ ಬಳಕೆಗೆ ವಿರೋಧ ಮಾಡುತ್ತಿದ್ದ ಆದರೆ ಆತನ ಹೆಂಡತಿ ಭೀಮವ್ವ ಮಗಳಿಗೆ ಪ್ರೋತ್ಸಾಹ ನೀಡುತ್ತಿದ್ದಳು .
ಹೀಗೆ ಮಕ್ಕಳ ಜೀವನದ ಬಗ್ಗೆ ಸದಾ ಯೋಚಿಸುತ್ತಾ ಅವರು ಕಾಳಜಿಗಾಗಿ ಹಂಬಲಿಸಿದೆ ಜೀವಕ್ಕೆ ಆಘಾತ ಕಾದಿತ್ತು.
ಆಷಾಡ ಮಾಸ ಕೊನೆ ಸೆಮಿಸ್ಟರ್ ಅಂತ ಮಗಳು ತನ್ನ ಸ್ನೇಹಿತರೊಂದಿಗೆ ಪ್ರವಾಸ ಹೋಗುವೆ ಎಂದು ಕೇಳಿದಳು ಆದರೆ ತಿಮ್ಮಪ್ಪ ಕಳುಹಿಸಲು ನಿರಾಕರಿಸಿದ ಅಂಜಲಿ ದುಃಖದಿಂದ ಊಟ ಮಾಡದೇ ಮಲಗಿದಳು. ಬೆಳಿಗ್ಗೆ ಅದೇ ಮುನಿಸು ಹಾಗೆ ಉಳಿದಿತ್ತು. ಕೆಲಸ ಮಾಡದೆ ಮಲಗಿಕೊಂಡು ಮೊಬೈಲ್ ಫೋನ್ ನೋಡುತ್ತಿದ್ದ ಮಗಳಿಗೆ ತಿಮ್ಮಪ್ಪ ಹಗಲೂ ರಾತ್ರಿ ಮೋಬೈಲ್ ನೋಡಿ ಕಣ್ಣು ಕಪ್ಪಾಗಿದ್ದಾವೆ , ಹೀಗೆ ಆದರೆ ಯಾರು ಮದುವೆ ಮಾಡಿಕೊಡುತ್ತಾರೆ ಅಂತ ಗದರಿಸಿ ಮೊಬೈಲ್ ಕಿತ್ತುಕೊಂಡು ಹೋಗುತ್ತಾನೆ. ಬಿಸಿ ರಕ್ತತುಂಬಿದ ಅಂಜಲಿ ಕೋಪದಿಂದ ಮನೆಯೊಳಗೆ ಹೋಗಿ ಬಾಗಿಲು ವಿಷವನ್ನು ಕುಡಿದು ಬಿಡುತ್ತಾಳೆ. ಸಾಯುವ ಉದ್ದೇಶದಿಂದ ಅಲ್ಲ ತನ್ನ ತಂದೆಯನ್ನು ಹೆದರಿಸಲು, ತಾನೆ ತಂದೆಗೆ ಫೋನ್ ಮಾಡಿ ವಿಷಯ ತಿಳಿಸುತ್ತಾಳೆ. ಹೊಲಕ್ಕೆ ಹೊರಟಿದ್ದ ತಿಮ್ಮಪ್ಪ ಊರು ಅಗಸಿ ದಾಟಿರಲಿಲ್ಲ ಮಗಳು ಕರೆಗೆ ಓಡಿ ಬಂದು ಎದೆ ಬಡಿದುಕೊಂಡು ಅಳಲು ಪ್ರಾರಂಭಿಸಿದ ಕಾರಣ ಅವಳು ಸೇವಿಸಿದ ಮದ್ದಿನ ಪ್ರಭಾವ ಅರಿತಿದ್ದ. ತಂದೆಗೆ ಮಗಳ ಪ್ರಾಣ ಹೋಗೋದು ಖಚಿತ ಅಂತ.
ಹೊಲದ ಬದುಗಳನ್ನು ಸ್ವಚ್ಛ ಮಾಡಿ ಬೆಳೆ ಬೆಳೆಯಲು ಬಳಸುತ್ತಿದ್ದ ಮದ್ದು ರೈತನ ಮುದ್ದಿನ ಮಗಳ ಬದುಕಿನಲ್ಲಿ ಬಾಳಿ ಬೆಳಗಬೇಕಾದ ಜೀವ-ಜೀವನವನ್ನೆ ನುಂಗಿತು.
ಕ್ಷಣದ ಕೋಪದ ನಿರ್ಧಾರ ಜೀವನವನ್ನೆ ನುಂಗಿತು ಅಪ್ಪ ನನ್ನ ಬದುಕಿಸು ಹೆದರಿಸಲು ಮಾಡಿದೆ.ಅಪ್ಪ ಅಪ್ಪ ಅಮ್ಮ ಅಮ್ಮ ಎಂದು ಚಚೀರಾಡುತ್ತಾ ಸಂಕಟದಿಂದ ನರಳಿ ನರಳಿ ಪ್ರಾಣ ಪಕ್ಷಿ ಪಂಜರದಿಂದ ಹಾರಿ ಹೋಯಿತು………!
ಡಾ.ಯಲ್ಲಮ್ಮ ಕೆ.