ಕಾವ್ಯ ಸಂಗಾತಿ
ಬಾಗೇಪಲ್ಲಿ ಅವರ ಹೊಸ ಕವಿತೆ
ಗಜಲ್
ಗಜಲ್
( ಕಾಲಾಯ ತಸ್ಮೈ ನಮಃ)
ಮುಂಬರುವ ಕ್ಷಣಕ್ಕೆ ಈಗಲೇ ಹೋಗಲಾರೆ
ಕಳೆದ ಹಿಂದಿನ ಗಳಿಗೆಗೆ ಸಹ ತೆರಳಲಾರೆ
ಪ್ರಸ್ತುತ ತೇಲಾಡುತಿಹ ಘಳಿಗೆಯು ನಿನ್ನದು
ಅರೆ ವಿಘಳಿಗೆಯೂ ಸಹ ಹೆಚ್ಚು ಇದರಲ್ಲಿ ಇರಲಾರೆ
ನಾಳೆಯನು ಊಹಿಸು ನೆನ್ನೆಗಳ ಆಧಾರದ ತಕ್ಕಡಿಯಲಿ
ಅನುಭವಿಸು ಬಂದಂತೆ ಪುನಃ ಅದನು ಪಡೆಯಲಾರೆ
ಬಂದಂತೆ ಸ್ವೀಕರಿಸು ಮುಂಬರುವ ಲಕ್ಷ ಕ್ಷಣಗಳನು
ಸಖ ದುಃಖ ಯಾವುದರಲಿ ಶಾಶ್ವತ ತಂಗಲಾರೆ
ಅನಾದಿ ಕಾಲದಿಂದ ನಡೆದಿಹ ಯುಗ ಧರ್ಮವಿದು
ನಿನಗೊಪ್ಪದೆಂದು ಅದನು ಸ್ವೀಕರಿಸದಿರಲಾರೆ
ಕೃಷ್ಣಾ! ಬಂದ ಯಮನನು ನಗುತ ಸ್ವಾಗತಿಸು
ಶತಪ್ರಯತ್ನದಿ ಆತನ ಎಂದಿಗೂ ತಡೆಯಲಾರೆ.
ಬಾಗೇಪಲ್ಲಿ