ಶಾರದಜೈರಾಂ.ಬಿ ಅವರ ಕವಿತೆ’ಭಾವನೆಯ ಭವ’

ಹಸಿವು ಹಲವು ಬಗೆ
ಹೆಚ್ಚೆಚ್ಚು ತಿಳಿಯುವ ಹಂಬಲದ ಹಸಿವು
ಜ್ಞಾನಿಗಳೊಂದಿಗೆ ಮಾತನಾಡುವ ಹಸಿವು
ಮಾನವೀಯ ಮನುಜನಿಗೆ ಬೆಂಬಲಿಸುವ ಹಸಿವು
ಹಳತಾಗಿರಲಿ ಹೊಸದಾಗಿರಲಿ
ಉತ್ತಮ ಪುಸ್ತಕ ಓದುವ ಕಾತರದ ಹಸಿವು
ಸದ್ಗುಣಗಳ ಕಂಡರೆ
ಪ್ರಶಂಸಿಸುವ ಹಸಿವು
ನಾಟ್ಯ ಸಂಗೀತ ಉಸಿರಾಗಿಸಿಕೊಂಡವರ
ಕೊಂಡಾಡುವ ಹಸಿವು
ಕರುಣೆಗೆ ಕಣ್ಣಾಗುವ
ಹಸಿವು
ಮಮತೆಗೆ ಮಾತೆಯಾಗುವ
ಹಸಿವು
ದುಃಖಕ್ಕೆ ಸಾಂತ್ವನ
ಹೇಳುವ ಹಸಿವು
ಸಂತಸವ ಕಂಡು
ಸಂಭ್ರಮಿಸುವ ಹಸಿವು
ಸವ೯ರಿಗೂ ಒಳಿತಾಗಲಿಯೆಂದು
ಪ್ರಾರ್ಥಿಸುವ ಹಸಿವು
ಕೆಡುಕುಕ್ಷಾಮಗಳಿಗೆ ವಿದಾಯ
ಹೇಳುವ ಹಸಿವು
ಹಸಿವಿಗೆ ಅಂತ್ಯವಿರದ ಅನಂತ
ಅಹರ್ನಿಶಿ…!!

Leave a Reply

Back To Top