ಕಾವ್ಯ ಸಂಗಾತಿ
ಸವಿತಾ ದೇಶಮುಖ
ಭ್ರೂಣ ಹೇಳಿದ ಕಥೆ
ಅನುರಾಗದಲಿ ಮೂಡಿ ಬಂದ ಭ್ರೂಣ
ನಾನು,ತಾಯ್ ಗರ್ಭದಿ ಮೂಡಿ
ಮಡಿಲ ತುಂಬುವ ಹವಣೆಯಲಿ…..
ಹೆಣ್ಣಾದರೇನು…ಗಂಡಾದರೇನು?
ಕುಟುಂಬದ ಕಣ್ಮಣಿ-ಬಾಳಿನ ಐಸಿರಿ
ಮುದ್ದು ಕಂದನಾಗುವ ಉನ್ಮಾನಮದಲ್ಲಿ…
ಎನ್ನ ಜನ್ಮದ ಸಂಭ್ರಮದಲ್ಲಿ
ನಲಗುತ್ತಿಹರು ಹುಮ್ಮಸದಲ್ಲಿ
ಪರಮನನುಭಾವದ ಅಲೆಯಲ್ಲಿ….
ಗಂಡಾಗಿ ಜನಿಸಿದರೆ ನಲಿವರಿವರು
ಸಂಭ್ರಮದ ಚಿತ್ತ- ಸಂತಸದ ದೀಪ್ತಿ
ಹರಿ ಹರಿದಾಡುವದು ಎಲ್ಲೆಡೆ…….
ನಾನು ಹೆಣ್ಣಾದರೆ ಸಪೂರರಿವರು
ಎದೆಯ ಮೂಲೆಯಲಿ ಸಣ್ಣದೊಂದು
ಭಯವ ಹೊತ್ತು, ಕೀಳರಿಮೆಯ ಭಾವದಲ್ಲಿ….
ಕುವರನ್ನು ಪಡೆಯವ ಗಂಧಗೌರವ ಭಾವವು
ಕುವರಿಯು ಪಡೆಯುವಂತೆ ಆಗಲಿ
ಸಂಕಲ್ಪದ ಸ್ಥೈರ್ಯದ ಪುಲಕದಲ್ಲಿ……
ವನಿತೆಯೆಂದು ಕರೆದರೆ” ಓ”
ಎನುತ ಆನಂದ ಲಹರಿಯಲಿ
ತೇಲಾಡಲಿ ಉಕ್ಕೇರಿದ ಭಾವದಲ್ಲಿ……
ಜನಿಪೆ ನಾನು ವೀರ ಆರ್ಯಯಾಗಿ
ಚೆನ್ನಮ್ಮಳಾಗಿ -ಚೆನ್ನಭೈರವಿಯಾಗಿ
ವೀರಮ್ಮಜಿ -ಮಲ್ಲಮ್ಮಳಾಗಿ ಮೆರವೆ…..
ಲೋಕವೇ ಗೆಲ್ಲುವ ಸಂಸ್ಮರಣೆಯಲಿ
ಸಮಾನತೆಯ ಸ್ಪೂರ್ತಿಯಾಗಿ
ನಂಬಿಕೆಯ ಕುದುರೆ ಏರಿ- ಸನ್ಮಾನದಲ್ಲಿ…
ಮಾನನಿಯಾಗುವ ಮನಿಷೇಯಲಿ…….
ಸವಿತಾ ದೇಶಮುಖ
Super