ವ್ಯಾಸ ಜೋಶಿ ಅವರ ಹಾಯ್ಕುಗಳು

ಬರೆಯುತ್ತಿದ್ದೆ,
ಹೀರೋ ಮದುವೆಯಾದ
ಕಥೆ ಮುಗೀತು.
*
ಮೂಕಿಯಾದರೂ
ಹಾಡುವಳು; ಮನದಿ
ಅವನ ನೋಡಿ.
*
ಆ ವಾಚಾಳಿಗೂ
ಅವನ ಸಾಮಿಪ್ಯದಿ
“ಮೌನ”, ಬಂಗಾರ.
*
ಪ್ರೀತಿ ವಾತ್ಸಲ್ಯ
ಖರೀದಿಗಿದೆಯೆಂಬ
ಹುಚ್ಚರು ನಾವು.
*
ಬಿಡಲಾಗದು,
ಆತ್ಮಹತ್ಯೆ ಯಂತಹ
ಆತ್ಮ ಪ್ರಶಂಸೆ.
*
ಜಾಣಗೆ ಬೇಡ
ಬುದ್ಧಿಮಾತು ; ದಡ್ಡನು
ಕೇಳುವುದಿಲ್ಲ.

——————–

Leave a Reply

Back To Top