‘ದೂರ ದರ್ಶನ ಒಂದು ಹೆಮ್ಮೆಯ ಹಿನ್ನೋಟ’ ವಿಶೇಷ ಲೇಖನ-ಗಾಯತ್ರಿ ಸುಂಕದ ಬಾದಾಮಿ

ದೂರದರ್ಶನ ೯೦ರ ದಶಕದ ಲ್ಲಿ ತನ್ನದೇ ಆದ ಛಾಪನ್ನು  ಮೂಡಿಸಿತ್ತು.ನಮ್ಮ ಮನೆಯಲ್ಲಿ ಮತ್ತು ಮನೆಯಲ್ಲಿ ಮನೆ ಮಾಡಿದ್ದ ಕಾಲವದು. ಪ್ರತಿ ವರ್ಷ ನವೆಂಬರ್ ೨೧ರನ್ನು ವಿಶ್ವ. ದೂರದರ್ಶನ ದಿನವನ್ನಾಗಿ ಆಚರಿಸಲಾಗುತ್ತಿದೆ. ತನ್ನಿ ಮಿತ್ತ ಈ ಲೇಖನ.
ಕೇವಲ ರೇಡಿಯೋ ಮಾತ್ರ ಮನರಂಜನಾ ಮಾಧ್ಯಮದ  ಮುಖ್ಯ ಪಾತ್ರ ವಾಗಿದ್ದಾಗ  ದೂರ ದರ್ಶನ. ಮನರಂಜನಾ ಮಾಧ್ಯಮದ  ಮುಖ್ಯ ಪಾತ್ರ ವಹಿಸಿತು.ಆಗ ಕೇವಲ   ದೂರ ದರ್ಶನದ ಕಾರ್ಯಕ್ರಮಗಳೇ ಮನೆ ಮಾತಾಗಿದ್ದವು ,’. ಬುಧವಾರಕ್ಕೆ ಬರುವ ಚಿತ್ರಹಾರ್, ರವಿವಾರದ ರಂಗೋಲಿ, ಶನಿವಾರದ ಸಾಪ್ತಾಹಿಕ, ಚಿತ್ರಮಂಜರಿಯಲ್ಲಿ ಬರುವ ಕನ್ನಡ ಹಾಡಿನ ಸಲುವಾಗಿ ಕಾಯುತ್ತಿದ್ದ ಕಾಲವು ನಮ್ಮನ್ನು  ಟೀವಿ ಯ ಮುಂದೆ ಕಟ್ಟಿ ಹಾಕಿದ್ದ ಕಾಲವದು.
ರವಿವಾರ ಬರುತ್ತಿದ್ದ ರಾಮಾಯಣ  ಶುರುವಾಗುವುದಕ್ಕಿಂತ.  ಮುಂಚೆ ಎಷ್ಟೋ ಜನರು ಕಾಯಿ ಒಡೆದು ಟೀವಿ ಪೂಜೆ ಮಾಡಿದ್ದನ್ನು ನೋಡಿದ್ದೇನೆ.ಮಹಾಭಾರತದ  ಪಿತಾ ಶ್ರೀ  ,ಮಾಮಾಶ್ರಿ, ಭಾಂಜೆ ಮುಂತಾದ ಶಬ್ದಗಳು  ನಮ್ಮ ಆಡು ಭಾಷೆಯಲ್ಲಿ ಬಳಕೆಗೆ ಬರ ತೊಡಗಿದ್ದವು. ರಾಮಾಯಣ ಮತ್ತು ಮಹಾಭಾರತ ನೋಡಲೆಂದೇ ಎಷ್ಟೋ ಜನರು ಟೀವಿ ಖರೀದಿ ಮಾಡಿದ್ದುಂಟು.ರಾಮಾಯಣ ಮತ್ತು ಮಹಾಭಾರತ ವನ್ನು ಜನರು ಮೈ ಮರೆತು ನೋಡುತ್ತಿದ್ದ್ದಾಗಲೇ ಮನೆಗಳು ಕಳ್ಳತನವಾದ ಸುದ್ದಿಗಳು  ಬಂದ  ಸುದ್ದಿಗಳು ಇವೆ. ಎಷ್ಟೋ ರೈಲುಗಳು ಸಹ ಮಹಾಭಾರತ ಮತ್ತು ರಾಮಾಯಣ ದ ಸಂದರ್ಭದಲ್ಲಿ ತಮ್ಮ ಸಂಚಾರ ವೇಳೆಯನ್ನು ಬದಲಿಸಿದ್ದು ಇದೆ.


ಚಂದನದ ಮಾಯಾಮೃಗ ಧಾರಾವಾಹಿ ಇದ್ದಾಗ ರಸ್ತೆಗಳೆಲ್ಲ ಬಿಕೋ ಎನ್ನುತ್ತಿದ್ದವು. ವಿಶ್ವಾಮಿತ್ರ, ಚಂದ್ರಕಾಂತ,,ಶಕ್ತಿಮಾನ್, ಸುರಭಿ,,ಭಾರತ್ ಕಿ ಏಕ್ ಖೋಜ್, ತಮಸ್ ಮುಂತಾದ ಉತ್ತಮ ಕಾರ್ಯ ಕ್ರಮಗಳು ಜನರ ಮನದಲ್ಲಿ ಮನೆ ಮಾಡಿದ್ದವು. ಸುರಭಿ ಕಾರ್ಯ ಕ್ರಮ ಮುಗಿದ ಮೇಲೆ ಕೇಳುವ ಪ್ರಶ್ನೆಗೆ ನಾವು ಮುಗಿ ಬಿದ್ದು ಕಾಯುತ್ತಿದ್ದೆವು.ಈಗ ಬೇಕಾದಷ್ಟು ಚಾನೆಲ್ ಗಳಿದ್ದರೂ ದೂರದರ್ಶನದ ಸವಿ ನೆನಪುಗಳು ಈಗಲೂ ಹಾಗೆಯೇ ಇವೆ.
ಬನ್ನಿ  ಮುನ್ನಡೆಯೋಣ.


Leave a Reply

Back To Top