ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇರಿದು ಗಾಯ ಮಾಡಿದೆ ಆ ನೆನಪು
ಸರಿದು ಹೋಗದಾಗಿದೆ ಆ ನೆನಪು ll

ಬೆರಳ ಸಂಧಿಯಿಂದ ಹರಿದು ಬಂತು
ತೋಳು ಬಳಸಿ ಹಿಡಿದಿದೆ ಆ ನೆನಪು ll

ಮಾತಿನಲ್ಲಿ ಮತ್ತೇರಿಸಿ ಕಟ್ಟಿ ಹಾಕಿದೆ
ಕವಿತೆಯ ಗುಂಗಿನಲಿದೆ ಆ ನೆನಪು ll

ಪ್ರೇಮವು ಕಣ್ಣುಗಳಲ್ಲಿ ಐಕ್ಯವಾಗಿತ್ತು
ಬಣ್ಣದ ಕನಸಲಿ ಮುಳುಗಿದೆ ಆ ನೆನಪುll

ತಾಯಿ ಮಮತೆಯನು ಕ್ಷಣ ಮರೆಸಿತ್ತು
ಪ್ರೀತಿಯ ಸೆಳೆತಕ್ಕೆ ಸಿಲುಕಿದೆ ಆ ನೆನಪು ll


About The Author

Leave a Reply

You cannot copy content of this page

Scroll to Top