ಹಮೀದಾಬೇಗಂ ದೇಸಾಯಿ ಅವರ ಗಜಲ್

ಮನದ ಮೋಡಗಳ ನಡುವೆ ಕನಸಿನ ಮಿಂಚೊಂದು ಮಿಂಚುತಿದೆ ಚಂದದಲಿ
ಅವಿತ ಭಾವಗಳ ಬಳ್ಳಿಯಲಿ ಆಸೆಯ ಮೊಗ್ಗೊಂದು ಅರಳುತಿದೆ ಚಂದದಲಿ

ಹೂವ ರಾಶಿ ಸುರಿದಿದೆ ಅದೇಕೋ ಅವ ಬರುವ ದಾರಿಯಲಿ
ಹಸಿರು ಹುಲ್ಲಿನ ಹಾಸಿನ ಮೇಲೆ ನವಿಲೊಂದು ಕುಣಿಯುತಿದೆ ಚಂದದಲಿ

ಎದೆಯ ಬಡಿತದಲಿ ಮೆಲುವಾಗಿ ಹರುಷದ ಅಲೆಯು ಏಳುತಿದೆ ಗೆಳತಿ
ಮಧುರ ನೋವನು ನೆನೆದು ಮೈಮನದಿ ಖುಷಿಯೊಂದು ಮೂಡುತಿದೆ ಚಂದದಲಿ

ತಾರೆಗಳ ಚಾದರವನು ಹೊದೆದು ಬರುತಿಹನು ಚಂದಿರ ನಭದಿ ನಗುತಲಿ
ಕಣ್ಣ ಬೆಳಕಿನಲಿ ಪ್ರೇಮ ರೂಪಿನ ಛಾಯೆಯೊಂದು ಕಾಣುತಿದೆ ಚಂದದಲಿ

ಬಾಗಿಲಿನ ಮಾವಿನ ತೋರಣ ಮುದದಿ ಗಾಳಿಗೆ ತೂಗುತಿದೆ ಬೀಗುತಲಿ
ಬೇಗಂಳ ಹೃದಯ ವೀಣಿ ನಂದದಿ ರಾಗವೊಂದು ಮೀಟುತಿದೆ ಚಂದದಲಿ


6 thoughts on “ಹಮೀದಾಬೇಗಂ ದೇಸಾಯಿ ಅವರ ಗಜಲ್

  1. ಭಾವನೆಗಳ ಆಳ ಮತ್ತು ಕನಸುಗಳ ಸೂಕ್ಷ್ಮತೆ ಸುಂದರವಾಗಿ ವ್ಯಕ್ತವಾಗಿದೆ.
    ಒಟ್ಟಾರೆ, ಕವನ ಚಂದದ ರಚನೆಯೊಂದಿಗೆ ಹೃದಯಸ್ಪರ್ಶಿಯಾಗಿ ಮೂಡಿದೆ.

    1. ಓದಿ ಮೆಚ್ಚುಗೆಯ ನುಡಿಗಳನ್ನು ವ್ಯಕ್ತಪಡಿಸಿದ ತಮಗೆ ಆತ್ಮೀಯ ಧನ್ಯವಾದಗಳು.
      ಹಮೀದಾಬೇಗಂ.

  2. ಮನದ ಮೋಡಗಳ ನಡುವೆ ಗಜಲ್ ಅರಳಿದ ರೀತಿ ಸೊಗಸಾಗಿ ಮೂಡಿಬಂದಿದೆ.

  3. ಸುಮಧುರ ಭಾವಗಳ, ಸುಂದರ ಕಲ್ಪನೆಗಳ ಹೂಗುಚ್ಚ ತಮ್ಮ ಈ ಗಜಲ್ ಮೇಡಂ. ತುಂಬಾ ಸೊಗಸಾಗಿದ ಬರಹ ಮೇಡಂ

Leave a Reply

Back To Top