ಅನಸೂಯ ಜಹಗೀರದಾರ ಅವರ ಗಜಲ್

ಈ ಸಂಜೆ ಸುರಿದ ಮಳೆಯ ಹನಿ ಹನಿಯು ನಿನ್ನ ಇರುವ ನೆನೆಯಿತು
ಕಪ್ಪಾದ ಹೂವಿನ ದಳದಳವು ಉದುರುತ್ತ ಮೇಘ ಮಲ್ಹಾರ ಹಾಡಿತು

ಹರ್ಷೋನ್ಮಾದದ ಪ್ರತಿ ಚಣವೂ ಗುಣುಗುಣಿಸಿತು ನೀನಾಡಿದ ಮಾತನು
ನಿನ್ನ ಸನಿಹದ ಊಹೆಯಲಿ ಕಣಕಣವು ಬಿಸುಪು ಮೈ ಮತಿ ಮತ್ತೇರಿತು

ಆಗಸದಿ ರಂಜಿಸಿದ ಇಂದ್ರ ಧನುಷಿನಲಿ ಏಳೇಳು ವರ್ಣ ನಲಿದವು
ಬಯಕೆ ಶಾಹಿಯಲಿ ಬರೆದ ಚಿತ್ತಾರ ಎದೆ ಕ್ಯಾನ್ವಾಸಿನಲಿ ಮೂಡಿತು

ಭರವಸೆಯ ಪ್ರೇಮ ಜಲವು ಹರಿದು ಭವಿತವ್ಯ ಕೊಳವ ತುಂಬಿತು
ಬಚ್ಚಿಟ್ಟ ನವಿಲುಗರಿ ಬಯಲಿನಲಿ ವಿಹರಿಸಿ ಈ ಆತ್ಮವ ಸೋಕಿತು

ಹಂಬಲಗಳಿಗೀಗ ಮನದಲಿ ಇಂಬಿದೆ ಪ್ರಣಯ ಸದನ ಕರೆದಿದೆ ಅನು
ನಿನ್ನ ಪ್ರೇಮದ ಹುಡಿಯು ತನುವಿನಲಿ ಹರಿದಾಡಿ ಈ ಮನವನೆ ತೀಡಿತು-


2 thoughts on “ಅನಸೂಯ ಜಹಗೀರದಾರ ಅವರ ಗಜಲ್

  1. ಭಾವನೆಗಳ ನಯವಾದ ಹರಿವು ಮತ್ತು ನಿಸರ್ಗದ ಸೊಗಸನ್ನು ಸೊಗಸಾಗಿ ಚಿತ್ರಿಸುತ್ತದೆ.
    ಪ್ರೇಮದ ಆಳ ಹಾಗೂ ಉತ್ಕಟತೆಯ ಅನುಭೂತಿ ನುಡಿಗಳಲ್ಲಿ ಚೈತನ್ಯವಾಗಿ ಮೂಡಿದೆ.

Leave a Reply

Back To Top