ಶಾಲಿನಿ ಕೆಮ್ಮಣ್ಣು ಅವರ ಕವಿತೆ -‘ಹೂಬನ’

ಈ ಜಗವೊಂದು ಸುಂದರ ಹೂಬನ/
ನಾವಿಲ್ಲಿ ಅರಳಿದ ಹೂವುಗಳಣ್ಣ//
ಇದು ಶಾಂತಿಯ ಸೊಗಸಿನ ತಾಣ /
ಜಾತಿ ನೀತಿಯ ಬಿಡೋಣ//
ನೆಮ್ಮದಿಯೇ ಪಾವನ/
ಜೊತೆಯಾಗಿ ನಡೆಯೋಣ//
ವೈವಿಧ್ಯತೆಯ ರಸದೌತಣ/
ಸಮರಸದಿಂದ ಬಾಳೋಣ//
ಪ್ರತಿದಿನವೂ ವಿನೂತನ/
ಸೂತ್ರಧಾರಿಯ ಕೈಗೊಂಬೆಗಳಣ್ಣ//
ಮೊಗ್ಗಿನಲಿ ರಸಗಾನ/
ಆಸ್ವಾದ ಸವಿಯೋಣ//
ಸೆಳೆಯುತಾ ಮೈಮನ/
ಬಿರಿದು ನಗುವ ಚೆಲ್ಲೋಣ//
ಕ್ಷಣಿಕ ಹೂಗಳ ಪಯಣ/
ಮಾನವತೆಯ ಮೆರೆಯೋಣ//
ನಿನ್ನೆ ನಾಳೆಗಳು ತಿಳಿಯದಣ್ಣ/
ಇಂದು ಕಂಗೊಳಿಸೋಣ//
ಬದುಕು ಅವಕಾಶಗಳ ತೋರಣ/
ಲಾಲಿತ್ಯದಿ ಸ್ವೀಕರಿಸೋಣ//
ಅರಳಿದಂತೆ ಬಾಡುವುದು ಜೀವನ/
ಸಾರ್ಥಕ್ಯವ ಸಾಧಿಸೋಣ//


Leave a Reply

Back To Top