‘ಶಿವ ಗುರುವೆಂದು ಬಲ್ಲಾತನೇ ಗುರು’ ವಿಶೇಷ ಲೇಖನಡಾ. ಶಶಿಕಾಂತ ಪಟ್ಟಣ ರಾಮದುರ್ಗ ಅವರಿಂದ

ಶಿವ ಗುರುವೆಂದು ಬಲ್ಲಾತನೇ ಗುರು
ಶಿವ ಲಿಂಗವೆಂದು ಬಲ್ಲಾತನೇ ಗುರು
ಶಿವ ಜಂಗಮವೆಂದು ಬಲ್ಲಾತನೇ ಗುರು
ಶಿವ ಪ್ರಸಾದವೆಂದು ಬಲ್ಲಾತನೇ ಗುರು
ಶಿವ ಆಚಾರವೆಂದು ಬಲ್ಲಾತನೇ ಗುರು
ಇಂತಿ ಪಂಚವಿಧ ಪಂಚ ಬ್ರಹ್ಮವೆಂದು
ತಿಳಿದ ಮಹಾ ಮಣಿಹ ಸಂಗನ ಬಸವಣ್ಣ
ಎನಗೆಯೂ ಗುರು ನಿನಗೂ ಗುರು
ಜಗಕೆಲ್ಲಾ ಗುರು ಕಾಣಾ ಗುಹೇಶ್ವರಾ    
  ಅಲ್ಲಮ ಪ್ರಭುದೇವರು

ಅಲ್ಲಮರು ಬಸವಣ್ಣನವರ ವ್ಯಕ್ತಿತ್ವವನ್ನ ಮತ್ತು ಅವರೊಳಗಿನ ಅಸಾಧಾರಣ ದಾರ್ಶನಿಕ್ತ್ವವನ್ನ ಜಗತ್ತಿಗೆ ಪರಿಚಯಿಸುವ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.

ಶಿವ ಗುರುವೆಂದು ಬಲ್ಲಾತನೇ ಗುರು

ಬಸವಣ್ಣ ಮತ್ತು ಅವರ ಸಮಕಾಲೀನ ಶರಣರು   ವೈಚಾರಿಕತೆ ವೈಜ್ಞಾನಿಕತೆ
 ಬದುಕಿನ ಪ್ರತಿಯಾದನೇಮಾಡಿ  ಸೃಷ್ಟಿ ಸಮಷ್ಟಿ ವ್ಯಕ್ತಿಯ ಜವಾಬ್ದಾರಿಗಳನ್ನು  ಗೊತ್ತು ಮಾಡಿಕೊಟ್ಟಿದ್ದಾರೆ.ಶಿವನೆಂಬುದು ಶರಣ ದೃಷ್ಟಿಯಲ್ಲಿ ಮಂಗಲ ಕಲ್ಯಾಣ ಜ್ಞಾನ ಎಂಬ ಪಾರಿಭಾಷಿಕ ಅರ್ಥಗಳು . ಶಿವ ಶಂಕರನಲ್ಲ ಶರಣರ ಶಿವ ಭಕ್ತನ ಹೃದಯದಲ್ಲಿ ಇರುವ ಅಗಾಧ ಜಂಗಮ ಚೈತನ್ಯವಾಗಿದೆ.
ಅಂತ ಪ್ರಜ್ಞೆಯೆ ಗುರು ಎಂದು ನಂಬಿರುವವನೇ ನಿಜವಾದ ಗುರು ಎಂದಿದ್ದಾರೆ.   ಅರಿವಿನ ಆರಂಭವೇ ಗುರು .

ಶಿವ ಲಿಂಗವೆಂದು ಬಲ್ಲಾತನೇ ಗುರು

ಲಿಂಗ ಇದು ಸಮಷ್ಟಿ ಭಾವವು . ಸಮಷ್ಟಿಯಲ್ಲಿ ಶಿವನಿದ್ದಾನೆ ಅದುವೇ ಕರಸ್ಥಲ ಲಿಂಗ . ಶಿವನೆನ್ನುವ ಭಾವವು ಕರಸ್ಥಲದ ಲಿಂಗದ ಕುರುಹಿನಲ್ಲಿ ಮೂಹುರ್ತಗೊಂಡಿದ್ದಾನೆ  .
ಶಿವನೇ ಲಿಂಗವೆಂದು ತಿಳಿದವ ಗುರು ಎಂದಿದ್ದಾರೆ ಅಲ್ಲಮರು.

ಶಿವ ಜಂಗಮವೆಂದು ಬಲ್ಲಾತನೇ ಗುರು

ಜಂಗಮ ಇದು ಸಮಾಜ ,ಜ್ಞಾನ ,ಚಲಶೀಲತೆ  ಚೈತನ್ಯ ಎಂಬ ಅನೇಕ ಅರ್ಥಗಳನೊಳದೊಂಡ ಶರಣರ ವ್ಯವಸ್ಥೆ . ಶಿವನ್ನ್ನು ಮಹಾಜ್ಞಾನ ಜಂಗಮದಲ್ಲಿ ಅಡಗಿದೆ ಸಮಾಜ ಸೇವೆಯೇ ಶಿವನ ಆರಾಧನೆ .ಶಿವನೆನ್ನುವುದು ಜಂಗಮದ ಮೂಲ . ಶಿವ ಜಂಗಮ ಒಂದೇ ಎಂದು ತಿಳಿದವನೇ ಗುರುವು.

ಶಿವ ಪ್ರಸಾದವೆಂದು ಬಲ್ಲಾತನೇ ಗುರು

ಪ್ರಸನ್ನತೆಯೇ ಪ್ರಸಾದವು ಇಂತಹ ಪ್ರಸನ್ನತೆಯಲ್ಲಿ.ಶಿವನನ್ನು ಕಂಡು ಇವೆರಡು ಒಂದೇ ಎಂದು ತಿಳಿದವನೇ ಗುರು . ಪ್ರತಿಯೊಂದು ಜೀವ ಜಾಲದಲ್ಲಿ ಪ್ರಸನ್ನತೆಯ ಭಾವವನ್ನು ಗುರುತಿಸಿ ಸಂತಸ ನೆಮ್ಮದಿ ಪ್ರೀತಿ ಭಾವವನ್ನು ಭಕ್ತನಲ್ಲಿ ಕಂಡಾಗ   ಅದುವೇ ಶಿವಮಯ .

ಶಿವ ಆಚಾರವೆಂದು ಬಲ್ಲಾತನೇ ಗುರು

ಆಚಾರ ಇದು ಸತ್ಯ ಶುದ್ಧಕಾಯಕದ ಅಭಿಯಾನ . ಇಂತಹ ಆಚಾರದಲ್ಲಿ ಶಿವನನ್ನು ಕಾಣುವವನೇ ಮತ್ತು ಶಿವ ಮತ್ತು ಇಂತಹ ಆಚಾರ ಒಂದೇ ಎಂದು ತಿಳಿದವನೇ ನಿಜವಾದ ಗುರು ಅರಿವಿನ ಪರಾಕಾಷ್ಠತೆ ,ಸತ್ಯ ಶುದ್ಧವಾದ ಕಾಯಕದಲ್ಲಿ ಶಿವನಿದ್ದಾನೆ .

ಇಂತಿ ಪಂಚವಿಧ ಪಂಚ ಬ್ರಹ್ಮವೆಂದು ತಿಳಿದ ಮಹಾ ಮಣಿಹ ಸಂಗನ ಬಸವಣ್ಣ ಎನಗೆಯೂ ಗುರು ನಿನಗೂ ಗುರು ಜಗಕೆಲ್ಲಾ ಗುರು ಕಾಣಾ ಗುಹೇಶ್ವರಾ

ಹೀಗೆ ಬದುಕಿನಲ್ಲಿ ಪಾರಮಾರ್ಥಿಕ ಅರ್ಥವನ್ನು ಪ್ರಾಪಂಚಿಕ ನೈಜ ನೆಲೆ ಸೆಲೆಯಲ್ಲಿಗುರುತಿಸಿದ ಇಂತಹ ಪಂಚ ವಿಧಾನಗಳನ್ನೇ ಪಂಚ  ಬ್ರಹ್ಮವೆಂದು ಅರಿತ ಮಹಾ ಮಣಿಹ
ಸಂಗನ ಬಸವಣ್ಣ ಎನಗೆಯೂ ಗುರು ನಿನಗೂ ಗುರು ಜಗಕೆಲ್ಲಾ ಗುರು ಕಾಣಾ ಎಂದಿದ್ದಾರೆ  ಅಲ್ಲಮರು .
———————————————————————————-

3 thoughts on “‘ಶಿವ ಗುರುವೆಂದು ಬಲ್ಲಾತನೇ ಗುರು’ ವಿಶೇಷ ಲೇಖನಡಾ. ಶಶಿಕಾಂತ ಪಟ್ಟಣ ರಾಮದುರ್ಗ ಅವರಿಂದ

  1. ಬಸವಣ್ಣ ಎನಗೆಯೂ ಗುರು ನಿನಗೂ ಗುರು
    ಜಗಕ್ಕೆಲ್ಲ ಗುರು… ಎನ್ನುವ ಮೂಲ ಸಿದ್ಧಾಂತವನ್ನು ತಿಳಿಸುತ್ತಾ ವಚನದ ಮೂಲಾ ರ್ಥ ವನ್ನು ಪ್ರತಿಯೊಂದು ಸಾಲುಗಳ ಮೂಲಕ ಸರಳತೆಯಿಂದ ತಿಳಿಸಿ ಹೇಳುವ ನಿಮ್ಮ ಲೇಖನ ಪ್ರತಿಯೊಬ್ಬರಿಗೂ ನೆನಪಿನಲ್ಲಿ ಇಟ್ಟುಕೊಳ್ಳಲು ಸಹಕಾರಿಯಾಗುತ್ತದೆ ಸರ್

    ಸುಧಾ ಪಾಟೀಲ ( ಸುತೇಜ )
    ಬೆಳಗಾವಿ

Leave a Reply

Back To Top