ಕಾವ್ಯ ಸಂಗಾತಿ
ಸವಿತಾ ಮುದ್ಗಲ್
‘ಒಲವ ಹೂ’
ಅದೆಷ್ಟು ಕನಸುಗಳು
ಒಡೆದು ಹೋಗಿದ್ದವೇನೊ
ಅದೆಷ್ಟು ನಿರೀಕ್ಷೆಗಳು
ನೀರಲಿ ಮುಳುಗಿದ್ದವೇನೋ?
ಅಕ್ಷಿಪಟಲಕು ಕಾಯುವ
ತವಕ ಹೆಚ್ಚಿಗೆ ಇತ್ತೇನೋ?
ಒಲವ ಮನಕು ನಿನ್ನಯ
ಕಾಣುವ ಬಯಕೆ ಇತ್ತೇನೋ?
ಮನಸಾರೆ ಬಳಿ ಬಂದು
ಒಮ್ಮೆಯೂ ಕೂಡ ಒಲವ
ಹೂ ಮುಡಿಗೇರಿಸಲಿಲ್ಲ….
ಪ್ರೀತಿಯ ಪಕಳೆಗಳೆಲ್ಲ
ಚದುರಿ ಹೋಗಿದ್ದವೇನೋ?….
ಸಂಜೆ ಪಡುವಣಕು
ಮುಳುಗವ ಸೂರ್ಯನ
ಕಾತುರ ಹೆಚ್ಚಿಗಿತ್ತೇನೋ?
ಏಳು ಬಣ್ಣಗಳ ಕಾಮನಬಿಲ್ಲಿಗೂ
ಚೂಪಾದ ಬತ್ತಳಿಕೆಯೊತ್ತು…
ಒಂದೊಂದಾಗಿ ಬೀಸಿ ಎದೆಗೆ
ಚುಚ್ಚುವ ಮನಸಿತ್ತೇನೋ??…
ದೀರ್ಘ ಬಾಳಿನಲ್ಲಿ ಒಮ್ಮೆಯೂ
ಕೂಡ ಒಲವಿನ ಹೂ ಅರಳಲಿಲ್ಲ….
ಒಮ್ಮೆಯೂ ಬಳಿ ಬಂದು ಸುವಾಸನೆಯ
ಹೂ ಮುಡಿಗೇರಲಿಲ್ಲ….
ಅದು ಅರಳಿ ಅಲ್ಲೇ ನಗುತ್ತಲಿತ್ತು
ಮಂಕು ಮನಸ್ಸುಗಳ ನಡುವೆ
ಗಹಗಹಿಸಿ ನಗುತ್ತಾ ನಗುತ್ತಾ
ಬಾನಲಿ ಮರೆಯಾಗಿತ್ತು!!.
ಸವಿತಾ ಮುದ್ಗಲ್